ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ನಿರ್ಧಾರ, ಎಣ್ಣೆ ಪ್ರೀಯರಿಗೆ ಶುಭ ಸುದ್ದಿ ನೀಡುತ್ತಾ ಸರ್ಕಾರ; ಏ.18ರ ಟಾಪ್ 10 ಸುದ್ದಿ!

Suvarna News   | Asianet News
Published : Apr 18, 2020, 05:06 PM IST
ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ನಿರ್ಧಾರ, ಎಣ್ಣೆ ಪ್ರೀಯರಿಗೆ ಶುಭ ಸುದ್ದಿ ನೀಡುತ್ತಾ ಸರ್ಕಾರ; ಏ.18ರ ಟಾಪ್ 10 ಸುದ್ದಿ!

ಸಾರಾಂಶ

ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ, ಏಪ್ರಿಲ್ 20 ರಿಂದ ಭಾಗಶಃ ಲಾಕ್‌ಡೌನ್ ಸಡಿಲಿಕೆಯಾಗಲಿದೆ. ಆದರೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 370 ದಾಟಿದೆ. ಇದು ಆತಂಕಕಾರಿಯಾಗಿದೆ. ಅತ್ತ ಅಮೆರಿಕದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 5000 ಗಡಿ ಸಮೀಪಿಸುತ್ತಿದೆ. ಶೀಘ್ರದಲ್ಲೇ ಎಣ್ಣೆ ಪ್ರಿಯರಿಗೆ ಸರ್ಕಾರ ಶುಭ ಸುದ್ದಿ ನೀಡಲು ರೆಡಿಯಾಗಿದೆ. ಡಾ. ರಾಜ್‌ಕುಮಾರ್ ಸಹಾಯ ಕುರಿತು ಅಭಿಮಾನಿಯ ಮಾತು, ಐಪಿಎಲ್ ಟೂರ್ನಿಗೆ ಹುಟ್ಟು ಹಬ್ಬದ ಸಂಭ್ರಮ ಸೇರಿದಂತೆ ಏಪ್ರಿಲ್ 18ರ ಟಾಪ್ 10 ಸುದ್ದಿ ಇಲ್ಲಿವೆ.

ಅಬ್ಬಬ್ಬಾ..! ಕರ್ನಾಟಕದಲ್ಲಿ 370ರ ಗಡಿ ದಾಟಿದ ಕೊರೋನಾ ಪೀಡಿತರ ಸಂಖ್ಯೆ..!...

ಶುಕ್ರವಾರಕ್ಕೆ ಹೋಲಿಸಿದರೆ ಇಂದು ಪತ್ತೆಯಾದ ಪ್ರಕರಣ ಸ್ವಲ್ಪ ಇಳಿಮುಖವಾಗಿದೆ. ಶುಕ್ರವಾರ ಬರೋಬ್ಬರಿ 44 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಇಂದು ಕೇವಲ 12 ಜನರಿಗಷ್ಟೇ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ಬಿಎಸ್‌ವೈ ಸುದ್ದಿಗೋಷ್ಠಿ: ರಾಜ್ಯದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲ...!...

ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಿರುವ ಸಿಎಂ ನೇತೃತ್ವದ ರಾಜ್ಯ ಸರ್ಕಾರ, ಏಪ್ರಿಲ್ 20 ರಿಂದ ಭಾಗಶಃ ಲಾಕ್‌ಡೌನ್ ಸಡಿಲಿಕೆಯಾಗಲಿದೆ. ಕೊರೋನಾ ವೈರಸ್ ಹೆಚ್ಚಾದ ಪ್ರದೇಶಗಳಲ್ಲಿ ಕಂಟೆನ್ಮೆಂಟ್ ಝೋನ್ ಹಾಗೂ ಲಾಕ್‌ಡೌನ್ ಸಡಿಲ ಬಗ್ಗೆ ಸಾಧಕ-ಬಾಧಕ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅವರು ಹಿರಿಯ ಅಧಿಕಾರಿಗಳೊಂದಿಗೆ ಇಂದು (ಶನಿವಾರ) ಸಭೆ ನಡೆಸಿದರು.

ಕೊರೋನಾ ಮರಣ ಮೃದಂಗಕ್ಕೆ ಅಮೆರಿಕಾ ತತ್ತರ; ಇದೀಗ ಮತ್ತೊಂದು ಹೊಸ ದಾಖಲೆ...

ಕೊರೋನಾ ಮರಣ ಮೃದಂಗಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕಾ ಅಕ್ಷರಶಃ ತತ್ತರಿಸಿದೆ. ಕೊರೋನಾ ಸಂಕಷ್ಟದಲ್ಲಿ ಅಮೆರಿಕಾ ಮತ್ತೊಂದು ದಾಖಲೆ ಬರೆದಿದೆ. ಒಂದೇ ದಿನ ಅಮೆರಿಕಾದಲ್ಲಿ 4591 ಮಂದಿ ಸಾವನ್ನಪ್ಪಿದ್ದಾರೆ. ಯಾವ ದೇಶದಲ್ಲಿಯೂ ಒಂದೇ ದಿನ ಇಷ್ಟೊಂದು ಮಂದಿ ಸಾವನ್ನಪ್ಪಿರಲಿಲ್ಲ. ಈಗಾಗಲೇ 7 ಲಕ್ಷ ಗಡಿ ದಾಟಿದೆ ಕೊರೋನಾ ಪಾಸಿಟೀವ್ ರಿಪೋರ್ಟ್.


ಲಾಕ್‌ಡೌನ್‌ ಎಫೆಕ್ಟ್‌: ಚರಂಡಿಯಲ್ಲಿ ಬಚ್ಚಿಟ್ಟು ಸಾರಾಯಿ ಮಾರಾಟ..!

ತಾಲೂಕಿನ ಮಮದಾಪುರ ತಾಂಡಾದ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಸಾಮೂಹಿಕ ದಾಳಿ 300 ಲೀಟರ್‌ ಬೆಲ್ಲದ ಕೊಳೆ ಹಾಗೂ 10 ಲೀಟರ್‌ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಆರೋಪಿಯ ವಿರುದ್ಧ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

IPL Birthday ಏಪ್ರಿಲ್ 18: ಅಪರೂಪದಲ್ಲೇ ಅಪರೂಪದ ಕ್ಷಣಗಳು ಇಲ್ಲಿವೆ ನೋಡಿ

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಏಪ್ರಿಲ್ 18 ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಚೊಚ್ಚಲ ವಿಶ್ವಕಪ್ ಗೆದ್ದ ಬೀಗಿದ್ದ ಟೀಂ ಇಂಡಿಯಾದ ಯಶಸ್ಸನ್ನು ಬಳಸಿಕೊಂಡು ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟುಹಾಕಿತು. 2008 ಏಪ್ರಿಲ್ 18ರಂದು ಅಧಿಕೃತವಾಗಿ ಚೊಚ್ಚಲ ಐಪಿಎಲ್ ಟೂರ್ನಿಗೆ ಚಾಲನೆ ಸಿಕ್ಕಿತು. ಆಮೇಲೆ ಆದದ್ದು ಈಗ ಇತಿಹಾಸ.


ಡಾ. ರಾಜ್‌ ಮಾಡಿದ ಸಹಾಯವನ್ನು ಸ್ಮರಿಸಿದ ಅಭಿಮಾನಿ..!

ಡಾ. ರಾಜ್ ಕುಮಾರ್ ಸಿನಿಮಾಗಳ ಪಾತ್ರಗಳ ಮೂಲಕ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದರು.  ಅವರು ಸಿನಿಮಾಗಳಲ್ಲಿ ಮಾತ್ರ ಆದರ್ಶಪ್ರಾಯವಾಗಿರಲಿಲ್ಲ, ನಿಜ ಜೀವನದಲ್ಲೂ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಕಷ್ಟ ಎಂದು ಬಂದವರಿಗೆ ಸಹಾಯಕ್ಕೆ ನಿಲ್ಲುತ್ತಿದ್ದರು. ಆದರೆ ಇವರು ಮಾಡಿದ ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗುತ್ತಿರಲಿಲ್ಲ. ಅಣ್ಣಾವ್ರು ಮಾಡಿದ ಸಹಾಯದ ಬಗ್ಗೆ ಅಭಿಮಾನಿಯೊಬ್ಬರು ಹೇಳಿಕೊಂಡಿದ್ದಾರೆ.


ಕೊರೋನಾ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ಪೊಲೀಸರಿಗೆ TVS ಮೋಟಾರ್ ಸಾಥ್!

ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿಗಳ ನಂತರ ಪೊಲೀಸರು ಕೂಡ ತಮ್ಮ ಪ್ರಾಣ ಪಣಕ್ಕಿಟ್ಟು  ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸರ ಹೋರಾಟಕ್ಕೆ ಟಿವಿಎಸ್ ಮೋಟಾರ್ ಕಾರ್ಪ್ ಸಾಥ್ ನೀಡಿದೆ.  


ಮಂಗಳವಾರ ಮದ್ಯಪ್ರಿಯರಿಗೆ ಸಿಗುತ್ತಾ ಗುಡ್‌ನ್ಯೂಸ್‌..?

ಮದ್ಯ ಮಾರಾಟ ತಡೆಯಿಂದ ಆರ್ಥಿಕತೆಗೆ ಹೊಡೆತ ಬೀಳುತ್ತಿದ್ದು, ಕ್ಯಾಬಿನೆಟ್‌ನಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಚರ್ಚೆ ನಡೆಯಲಿದೆ. ಆರ್ಥಿಕ ಸಂಕಷ್ಟದ ಬಗ್ಗೆ ಅಧಿಕಾರಿಗಳು ಸಿಎಂ ಗಮನಕ್ಕೆ ತಂದಿದ್ದು, ಮದ್ಯ ಮಾರಾಟ ಆರಂಭವಾಗಲಿದೆಯಾ ಎಂದು ಸಂಪುಟದಲ್ಲಿ ನಿರ್ಧಾರವಾಗಲಿದೆ.

ಲಾಕ್‌ಡೌನ್ ಇದ್ರೂ ಟ್ರಾಫಿಕ್ ಜಾಮ್, ಬಾಕಿಯಾದ ಆ್ಯಂಬುಲೆನ್ಸ್‌...

ಆ್ಯಂಬುಲೆನ್ಸ್‌ ಬರುವಾಗ ಯಾವುದೇ ವಾಹನವಾಗಿದ್ದರೂ ಮೊದಲು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು ಮಾನವೀಯತೆ ಹಾಗೂ ಕಾನೂನು ಸಹ ಆಗಿದೆ. ಆದರೆ, ದಾವಣಗೆರೆಯಲ್ಲಿ ತುರ್ತಾಗಿ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸೇರಿಸಲು ಹೊರಟಿದ್ದ ಆ್ಯಂಬುಲೆನ್ಸ್‌ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ.

ನೀವು ವಾಸವಿರೋ ವಾರ್ಡ್ ಹಾಟ್‌ ಸ್ಪಾಟಾ? ನಾರ್ಮಲ್ಲಾ?: ತಿಳಿದುಕೊಳ್ಳಿ..!...

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಅದರಲ್ಲೂ ಬೆಂಗಳೂರು ರೆಡ್‌ ಜೋನ್‌ ಆಗಿದ್ದು, ಕೆಲ ವಾರ್ಡ್‌ಗಳನ್ನು ಹಾಟ್‌ಸ್ಪಾಟ್‌ ಪ್ರದೇಶಗಳೆಂದು ಗುರುತಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್