ಕೊರೋನಾ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಮಿತಿ ರಚನೆ...!

Published : Apr 18, 2020, 04:06 PM ISTUpdated : Apr 18, 2020, 04:09 PM IST
ಕೊರೋನಾ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಮಿತಿ ರಚನೆ...!

ಸಾರಾಂಶ

ಕೊರೋನಾ ವಿರುದ್ಧ ಹೋರಾಟಕ್ಕೆ 11 ಮಂದಿ ಕಾಂಗ್ರೆಸ್ ನಾಯಕರ ಸಮಿತಿ ರಚಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ನವದೆಹಲಿ, (ಏ.18): ದೇಶಾದ್ಯಂತ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಲ್ಲಣ ಸೃಷ್ಟಿಸಿದೆ. ಇದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸವನ್ನೇ ನಡೆಸಿದೆ.

ಇದರ ನಡುವೆ ಪರಿಸ್ಥಿತಿ ಕುರಿತು ಪರಿಶೀಲನೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕಾಂಗ್ರೆಸ್ ನಾಯಕರ ಸಮಿತಿ ರಚನೆ ಮಾಡಿದ್ದಾರೆ.

ಬಿಎಸ್‌ವೈ ಸುದ್ದಿಗೋಷ್ಠಿ: ರಾಜ್ಯದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲ...!

 ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕಾಂಗ್ರೆಸ್ ನ ಹಲವು ನಾಯಕರು ಈಗಾಗಲೇ ಕೆಲ ಸಲಹೆಗಳನ್ನೂ ನೀಡಿದ್ದಾರೆ. ಇದರ ಮಧ್ಯೆ  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪರಿಸ್ಥಿತಿ ಅವಲೋಕನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನೇತೃತ್ವದಲ್ಲಿ 11 ಮಂದಿ ಕಾಂಗ್ರೆಸ್ ನಾಯಕರ ಸಮಿತಿ ರಚಿಸಿದ್ದಾರೆ. 

ಈ ಸಮಿತಿಯಲ್ಲಿ ರಾಹುಲ್ ಗಾಂಧಿ, ಚಿದಂಬರಂ, ಕೆ.ಸಿ.ವೇಣುಗೋಪಾಲ್ ಸೇರಿದಂತೆ 11 ಮಂದಿ ಇದ್ದಾರೆ. ಈ ಸಮಿತಿ ಪ್ರತಿದಿನ ಕೊರೋನಾ ವೈರಸ್ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲಿದೆ.

ಸಮಿತಿ ಇಂತಿದೆ.
1. ಡಾ. ಮನಮೋಹನ್ ಸಿಂಗ್ (ಚೇರ್ಮನ್)
2. ರಾಹುಲ್ ಗಾಂಧಿ
3.ರಣದೀಪ್ ಸಿಂಗ್ ಸುರ್ಜೇವಲಾ
4. ಕೆ.ಸಿ.ವೇಣುಗೋಪಾಲ್
5. ಪಿ.ಚಿದಂಬರಂ
6. ಮನೀಶ್ ತಿವಾರಿ
7.ಜಯರಾಮ್ ರಮೇಶ್
8.ಪ್ರವೀಣ್‌ ಚಕ್ರವರ್ತಿ 
9. ಗೌರವ್ ವಲ್ಲಭ
10.  ಸುಪ್ರೀಯಾ
11. ರೋಹನ್ ಗುಪ್ತಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ