ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ವಿವಿಧ ಜಿಲ್ಲೆಗಳು ನೆರೆಯಿಂದ ತತ್ತರಿಸಿವೆ. ಪ್ರವಾಹ ನಿಟ್ಟಿನಲ್ಲಿ ಸಹಾಯವಾಣಿ ಆರಂಭ ಮಾಡಲಾಗಿದೆ.
ಬೆಂಗಳೂರು [ಆ.08]: ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ವಿವಿಧ ಜಿಲ್ಲೆಗಳು ಮಳೆಯಿಂದ ತತ್ತರಿಸಿದ್ದು, ಜನರು ಪ್ರವಾಹ ಪರಿಸ್ಥಿತಿಯಿಂದ ನಲುಗಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದೆ. ಪ್ರವಾಹದಿಂದ ತತ್ತರಿಸಿದ ಜನತೆ ಸಹಾಯವಾಣಿಗೆ ಸಂಪರ್ಕಿಸಿದಲ್ಲಿ ಅಗತ್ಯ ನೆರವು ದೊರೆಯಲಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಲವು ಜಿಲ್ಲೆಗಳಲ್ಲಿ ಈಗಾಗಲೇ ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಸಹಾಯವಾಣಿ ಸಂಖ್ಯೆಯನ್ನು ಆರಂಭ ಮಾಡಲಾಗಿದೆ.
080 1070, 080 22340676
ವಾಟ್ಸಾಪ್ ಸಂಖ್ಯೆ - 9008405955
ಫೈರ್ ಎಮರ್ಜೆನ್ಸಿ - ಫ್ಲಡ್ ಕಂಟ್ರೋಲ್ ರೂಂ - 080 25573333
ವಾಟ್ಸಾಪ್ - 9513749080
For any flood related emergencies and rescue work please contact the given control room numbers. pic.twitter.com/I51Fx3Zq5f
— CM of Karnataka (@CMofKarnataka)