ಓರ್ವ ಆದರ್ಶ ರಾಜಕಾರಣಿ ಮಾಜಿ ಸಿಎಂ ಪುತ್ರಿಯ ಇದೆಂಥಾ ದರ್ಪ..!

By Web Desk  |  First Published Oct 8, 2018, 9:58 PM IST

ರಾಜ್ಯದ ಆದರ್ಶ ರಾಜಕಾರಣಿ ಎಂದು ಖ್ಯಾತಿ ಪಡೆದ ಮಾಜಿ ಮುಖ್ಯಮಂತ್ರಿಯ ಮಗಳ ಇದೆಂಥಾ ದರ್ಪ ಸ್ವಾಮಿ.


ರಾಮನಗರ, [ಅ.08]: ಮಾಜಿ ಸಿಎಂ ಪುತ್ರಿ ಅಂದ ಮಾತ್ರಕ್ಕೆ ಹೀಗಾ ಮಾಡೋದು. ರಾಜ್ಯದ ಆದರ್ಶ ರಾಜಕಾರಣಿ ಎಂದು ಖ್ಯಾತಿ ಪಡೆದ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರ ಮಗಳು ಓರ್ವ ಸಾಮಾನ್ಯ ಯುವತಿ ಮೇಲೆ ದರ್ಪ ಮೆರೆದಿದ್ದಾರೆ.

ಕರ್ನಾಟಕ ಕಂಡ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರ ಪುತ್ರಿ ವಿಜಯಲಕ್ಷ್ಮೀ ಅವರು ಯುವತಿ ಒಬ್ಬರಿಗೆ ಸಾರ್ವಜನಿಕವಾಗಿ ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ಇಂದು [ಸೋಮವಾರ] ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.

Tap to resize

Latest Videos

undefined

ವಂದಾರಗುಪ್ಪೆ ನಿವಾಸಿ ವರ್ಷಾ ಥಳಿತಕ್ಕೊಳಗಾದ ಯುವತಿ. ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಎದುರಿಗೆ ಬಂದಳೆಂಬ ಕ್ಷುಲ್ಲಕ ಕಾರಣಕ್ಕೆ ವಿಜಯಲಕ್ಷ್ಮೀ ಅವರು ವರ್ಷಾಗೆ ಮನಬಂದಂತೆ ಹೊಡೆದು ದರ್ಪ ತೋರಿದ್ದಾರೆ.

ಯುವತಿ ಮೇಲಿನ ದೌರ್ಜನ್ಯವನ್ನು ಖಂಡಿಸಿ ಅಲ್ಲಿದ್ದ ಸಾರ್ವಜನಿಕರು ವಿಜಯಲಕ್ಷ್ಮೀಯ ಕಾರಿನ ಗ್ಲಾಸ್ ಪುಡಿ-ಪುಡಿ ಮಾಡಿದ್ದಾರೆ. ಇದ್ರಿಂದ ಕೆಲ ಸಮಯ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಕೂಡಲೇ ಚನ್ನಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಸಮಾಧಾನ ಮಾಡಿದ್ದು, ಹಲ್ಲೆಗೊಳಗಾದ ಯುವತಿ ವಿಜಯಲಕ್ಷ್ಮೀ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಬಳಿಕ ಪೊಲೀಸ್ ಸ್ಟೇಷನ್ ನಲ್ಲಿ ಸಂಧಾನ ನಡೆದಿದ್ದು, ಕೆಂಗಲ್ ಹನುಮಂತಯ್ಯ ಅವರ ಪುತ್ರಿ ವಿಜಯಲಕ್ಷ್ಮೀಗೆ ಪೊಲೀಸರು ಬುದ್ಧಿ ಹೇಳಿ ಅಲ್ಲಿಂದ ಕಳುಹಿಸಿದ್ದಾರೆ. ತಂದೆ ಓರ್ವ ಆದರ್ಶ ರಾಜಕಾರಣಿ ಎಂದೇ ಫೇಮಸ್ ಆಗ್ದಿದಾರೆ. ಆದ್ರೆ ಮಗಳು ಮಾತ್ರ ಇಂತಹ ಕೆಟ್ಟ ಕೆಲಸದಿಂದ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.

click me!