#ಮೀ ಟೂ ಅಭಿಯಾನ ಜೋರು: ಹುದ್ದೆ ತ್ಯಜಿಸಿದ ಹಿರಿಯ ಪತ್ರಕರ್ತ!

Published : Oct 08, 2018, 07:36 PM ISTUpdated : Oct 08, 2018, 07:41 PM IST
#ಮೀ ಟೂ ಅಭಿಯಾನ ಜೋರು: ಹುದ್ದೆ ತ್ಯಜಿಸಿದ ಹಿರಿಯ ಪತ್ರಕರ್ತ!

ಸಾರಾಂಶ

#ಮೀ ಟೂ ಅಭಿಯಾನಕ್ಕೆ ಬಿತ್ತು ಪತ್ರಕರ್ತನ ವಿಕೆಟ್! ಹಿಂದೂಸ್ತಾನ್ ಟೈಮ್ಸ್ ರಾಜಕೀಯ ಸಂಪಾದಕ ಪ್ರಶಾಂತ್ ಜಾ ರಾಜೀನಾಮೆ! ವರದಿಗಾರ್ತಿ ಅವಂತಿಕ ಮೆಹ್ತಾರಿಂದ ಲೈಂಗಿಕ ಕಿರುಕುಳ ಆರೋಪ! ಉನ್ನತ ಸ್ಥಾನ ಕಳೆದುಕೊಂಡ ಮೊದಲ ವ್ಯಕ್ತಿ ಎಂಬ ಕುಖ್ಯಾತಿ  

ನವದೆಹಲಿ(ಅ.8): ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #ಮೀ ಟೂ ಅಭಿಯಾನ ಚುರುಕು ಪಡೆಯುತ್ತಿದ್ದು, ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ಹಿಂದೂಸ್ತಾನ್ ಟೈಮ್ಸ್ ರಾಜಕೀಯ ಸಂಪಾದಕ ಪ್ರಶಾಂತ್ ಜಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಈ ಸಂಬಂಧ ಹಿಂದೂಸ್ತಾನ್ ಟೈಮ್ಸ್ ಪ್ರಧಾನ ಸಂಪಾದಕ ಸುಕುಮಾರ್, ಸಂಪಾದಕೀಯ ಸಿಬ್ಬಂದಿಗೆ ಮೇಲ್ ಮಾಡಿದ್ದು, ಪ್ರಶಾಂತ್ ಜಾ ತಕ್ಷಣದಿಂದ ಜಾರಿಗೆ ಬರುವಂತೆ ಬ್ಯುರೋ ಮುಖ್ಯಸ್ಥ ಹಾಗೂ ರಾಜಕೀಯ ಸಂಪಾದಕ ಸ್ಥಾನ ತ್ಯಜಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. 

ಹಿಂದೂಸ್ತಾನ್ ಟೈಮ್ಸ್ ಮಾಜಿ ವರದಿಗಾರ್ತಿ ಅವಂತಿಕ ಮೆಹ್ತಾ, ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಇಬ್ಬರ ನಡುವಿನ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು #ಮೀ ಟೂ ಅಭಿಯಾನದಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದಲ್ಲಿ #ಮೀ ಟೂ ಅಭಿಯಾನ ಆರಂಭವಾದ ನಂತರ ಲೈಂಗಿಕ ಆರೋಪಕ್ಕಾಗಿ ಉನ್ನತ ಸ್ಥಾನ ಕಳೆದುಕೊಂಡ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಪ್ರಶಾಂತ್ ಜಾ ಗುರಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!