11 ಗಂಟೆಯೊಳಗೆ ಬನ್ನಿ, ಇಲ್ಲಾ ಅನರ್ಹರಾಗಿ, ರೆಬಲ್ಸ್‌ಗೆ ಡಿಕೆಶಿ ಡೆಡ್‌ಲೈನ್!

Published : Jul 22, 2019, 11:22 PM ISTUpdated : Jul 22, 2019, 11:27 PM IST
11 ಗಂಟೆಯೊಳಗೆ ಬನ್ನಿ, ಇಲ್ಲಾ ಅನರ್ಹರಾಗಿ, ರೆಬಲ್ಸ್‌ಗೆ ಡಿಕೆಶಿ ಡೆಡ್‌ಲೈನ್!

ಸಾರಾಂಶ

ಬಿಜೆಪಿ ಮತ್ತು ದೋಸ್ತಿಗಳ ನಡುವೆ ವಿಶ್ವಾಸ ಮತದ ಹಗ್ಗ ಜಗ್ಗಾಟ ನಡೆಯುತ್ತಿದ್ದರೆ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರು[ಜು. 22]  ಬನ್ನಿ ಅಥವಾ ಅನರ್ಹರಾಗಲು ಸಿದ್ಧರಾಗಿ ಹೀಗೆಂದು ಟ್ರಬಲ್ ಶೂಟರ್ ಎಂದು ಕರೆಸಿಕೊಂಡಿರುವ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

ಮಧ್ಯರಾತ್ರಿ ಯಾಗುತ್ತಿದ್ದರೂ ಸದನದಲ್ಲಿ ಕಲಾಪ ಮುಂದುವರಿದಿದೆ. ವಿಶ್ವಾಸ ಮತ ಯಾಚನೆ ನಡೆಯಲೇ ಬೇಕು ಎಂದು ಬಿಜೆಪಿ ಪಟ್ಟುಹಿಡಿದಿದ್ದರೆ, ಕಾಂಗ್ರೆಸ್-ಜೆಡಿಎಸ್ ಶಾಸಕರು ನಾಳೆಗೆ ಮುಂದೂಡಲು ಹರಸಾಹಸ ಪಡುತ್ತಿದ್ದಾರೆ.

ಕುಲಗೆಟ್ಟ ಸೋಶಿಯಲ್ ಮೀಡಿಯಾ? HDK ನಕಲಿ ರಾಜೀನಾಮೆ ಪತ್ರ ವೈರಲ್!

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಂಡಾಯ ಶಾಸಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಮುಂಬೈಯಲ್ಲಿದ್ದೀರೋ, ಲೋನವಾಲದಲ್ಲಿದ್ದೀರೋ, ನೀವೆಲ್ಲಿದ್ದೀರೋ, ನಾಳೆ 11 ಗಂಟೆಗೆ ಸದನಕ್ಕೆ ಬರಬೇಕು. ಇಲ್ಲದಿದ್ದರೆ ಅನರ್ಹರಾಗಲು ಸಿದ್ಧರಾಗಿ ಎಂದಿದ್ದಾರೆ.

ಇದಕ್ಕೆ ದೂರವಾಣಿ ಮೂಲಕ ಸುವರ್ಣನ್ಯೂಸ್ ಗೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ನಾವ್ಯಾವ ಬೆದರಿಕೆಗೆ ಬಗ್ಗುವವರಲ್ಲ, ಡಿಕೆ ಶಿವಕುಮಾರ್ ಅವರ ಇತಿಹಾಸ ನಮಗೆ ಗೊತ್ತಿದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್‌ ದೆವ್ವದ ಮನೆ, ದಿನಕ್ಕೊಂದು ಬಿಳಿ-ಕರಿ ದೆವ್ವ ಹೊರ ಬರ್ತಿವೆ: ಆರ್.ಅಶೋಕ್ ವ್ಯಂಗ್ಯ
ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ನಿಯಮ ಶೀಘ್ರ ಜಾರಿ: ಸಚಿವ ಶಿವರಾಜ ತಂಗಡಗಿ