
ಬೆಂಗಳೂರು[ಜು. 22] ಇದು ಅಪ್ಪಟ ಸುಳ್ಳು ಸುದ್ದಿ... ಸಂವಿಧಾನಾತ್ಮಕವಾಗಿರುವ ಸಿಎಂ ಹುದ್ದೆಗೆ ಅದರದ್ದೇ ಆದ ಗೌರವ ಇದೆ. ಆದರೆ ನಮ್ಮ ಸೋಶಿಯಲ್ ಮೀಡಿಯಾ ಎಲ್ಲಿಗೆ ಬಂದಿದೆ ಎಂದರೆ ರಾಜಕೀಯ ಗೊಂದಲಗಳು ನಡೆಯುತ್ತಿರುವುದರಲ್ಲಿಯೂ ಕಿಡಿಗೇಡಿತನ ಮಾಡಿದೆ.
ಕಳೆದ 5 ದಿನಗಳಿಂದ ವಿಶ್ವಾಸ ಮತದ ಚರ್ಚೆ ನಡೆಯುತ್ತಿದ್ದರೂ ಸ್ನ ಯಾವುದೇ ತೀರ್ಮಾನಕ್ಕೆ ಸದನ ಬಂದಿಲ್ಲ. ಇದೆಲ್ಲದರ ನಡುವೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರೆ ಎಂಬ ರೀತಿಯ ಪತ್ರ ಸೃಷ್ಟಿ ಮಾಡಿ ಹರಿಯಬಿಡಲಾಗಿದೆ.
ನಾನು JDS ಬಿಟ್ಟಿದ್ದೇಕೆ? ಸದನದಲ್ಲಿ ಸಿದ್ದರಾಮಯ್ಯ ಹೇಳಿದ ಇತಿಹಾಸದ ಗುಟ್ಟು
ಸಿಎಂ ಕುಮಾರಸ್ವಾಮಿ ರಾಜ್ಯಪಾಲ ವಿ.ಆರ್.ವಾಲಾ ಉಲ್ಲೇಖಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಬರೆದಿರುವ ಪತ್ರ ವೈರಲ್ ಆಗಿದೆ. ಸ್ವತಃ ಕುಮಾರಸ್ವಾಮಿ ಅವರ ಕೈಗೆ ಈ ಪತ್ರ ಬಂದು ತಲುಪಿದ್ದು ಅವರನ್ನೇ ಬೆಚ್ಚಿ ಬೀಳಿಸಿದೆ.
ಸೋಶಿಯಲ್ ಮೀಡಿಯಾ ಅದು ಯಾವ ಪರಿ ಕುಲಗೆಟ್ಟು ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದು ಬೇಕಿಲ್ಲ. ಜನರನ್ನು ದಿಕ್ಕು ತಪ್ಪಿಸುವ ಅಥವಾ ಈ ರೀತಿ ಕಿಡಗೇಡಿತನ ಮಾಡುವ ಸುದ್ದಿಗಳನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.