ಸರ್ಕಾರ ಉಳಿಸಲು ಮೈತ್ರಿ ವಿಫಲ? ಕೈ ಚೆಲ್ಲಿ ಹೊರಟ ದಿಲ್ಲಿ ನಾಯಕ?

By Web DeskFirst Published Jul 23, 2019, 3:10 PM IST
Highlights

ಹೈ ಡ್ರಾಮ ಕೊನೆಯಾಗುವ ಸಾಧ್ಯತೆ ಕಾಣುತ್ತಿದೆ. ದೋಸ್ತಿಯಲ್ಲಿ ಆತಂಕ ಮೂಡಿದ್ರೆ, ಬಿಜೆಪಿಯಲ್ಲಿ ಸರ್ಕಾರದ ರಚನೆ ವಿಶ್ವಾಸ ಎದ್ದು ಕಾಣುತ್ತಿದೆ. ಇತ್ತ ಕೈ ನಾಯಕರೋರ್ವರು ಕೈ ಚೆಲ್ಲಿ ಹೊರಟಿದ್ದಾರೆ.

ಬೆಂಗಳೂರು [ಜು.23] : ವಿಶ್ವಾಸಮತಕ್ಕೆ ಡೆಡ್ ಲೈನ್ ನೀಡಿದ್ದು, ದೋಸ್ತಿಗೆ ಆತಂಕವಾದ್ರೆ, ಅತ್ತ ಬಿಜೆಪಿಗರು ಸರ್ಕಾರ ರಚನೆ ವಿಶ್ವಾಸದಲ್ಲಿದ್ದಾರೆ. 

ಸರ್ಕಾರ ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದ ಕಾಂಗ್ರೆಸ್ ಹೈ ಕಮಾಂಡ್ ಪ್ರಯತ್ನ ಫಲಿಸಿದಂತೆ ಕಾಣುತ್ತಿಲ್ಲ. ಎಷ್ಟೇ ಯತ್ನಿಸಿದರೂ ಯಾವುದೇ ಪ್ರಯೋಜನವಾಗದೇ ‘ಕೈ’ ಚೆಲ್ಲಿತಾ ಎನ್ನುವ ಶಂಕೆ ಈಗ ಮೂಡಿದೆ. 

ಇದಕ್ಕೆ ಕಾರಣ ಇಂದು ಸಂಜೆ ವಿಶ್ವಾಸಮತ ಯಾಚನೆ ಡೆಡ್ ಲೈನ್ ಇದ್ದರೂ ಸಹ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ದಿಲ್ಲಿಗೆ ಹೊರಟಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಗರ ಸಂಖ್ಯಾಬಲ ಸದ್ಯ 105 ಇದ್ದರೆ, ಮೈತ್ರಿ ಪಾಳಯದ ಬಲ 103 ಇದೆ. ಒಟ್ಟು ಮೈತ್ರಿ ಪಡೆಯ 15 ರಾಜೀನಾಮೆ ನೀಡಿದ ಶಾಸಕರೊಂದಿಗೆ ಇಬ್ಬರು ಪಕ್ಷೇತರರು, ಇಬ್ಬರು ಅನಾರೋಗ್ಯ ಪೀಡಿತ ಶಾಸಕರು ಹಾಗೂ ಬಿಎಸ್ ಪಿ N ಮಹೇಶ್ ಸೇರಿ 20 ಮಂದಿ ಗೈರಾಗಿದ್ದಾರೆ. 

 ಈ ನಿಟ್ಟಿನಲ್ಲಿ ವಿಶ್ವಾಸಮತದಲ್ಲಿ ತಮ್ಮದೇ ಗೆಲುವು ಎನ್ನುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದು, ಬಿಜೆಪಿ ಸರ್ಕಾರ ರಚನೆ ಮಾಡುವುದು ಖಚಿತ ಎನ್ನುವ ಶಂಕೆ ಕೈ ದೋಸ್ತಿ ನಾಯಕರಲ್ಲಿ ಮೂಡಿದೆ. ಈ ನಿಟ್ಟಿನಲ್ಲಿ ವೇಣುಗೋಪಾಲ್ ಸಹ ಪ್ರಯತ್ನ ಕೈಬಿಟ್ಟು ದಿಲ್ಲಿಗೆ ತೆರಳುತ್ತಿದ್ದಾರೆ ಎನ್ನಲಾಗುತ್ತಿದೆ. 

click me!