ಅತೃಪ್ತರಿಗೆ KPCC ಅಧ್ಯಕ್ಷ ದಿನೇಶ್ ಗುಂಡೂರಾವ್ ವಾರ್ನಿಂಗ್

Published : Jul 23, 2019, 01:52 PM ISTUpdated : Jul 23, 2019, 02:01 PM IST
ಅತೃಪ್ತರಿಗೆ KPCC ಅಧ್ಯಕ್ಷ ದಿನೇಶ್ ಗುಂಡೂರಾವ್ ವಾರ್ನಿಂಗ್

ಸಾರಾಂಶ

ಕರ್ನಾಟಕ ರಾಜಕೀಯ ನಾಟಕಕ್ಕೆ ತೆರೆ ಬೀಳುತ್ತಿಲ್ಲ. ಟ್ರಬಲ್ ಶೂಟರ್ ಅನೇಕ ಬಾರಿ ವಾರ್ನಿಂಗ್ ನೀಡಿದ್ದರೂ ಬಗ್ಗದ ಅತೃಪ್ತರಿಗೆ ಈಗ KPCC ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಎಚ್ಚರಿಕೆ ರವಾನಿಸಿದ್ದಾರೆ. 

ಬೆಂಗಳೂರು[ಜು.23] : ಮುಗಿಯದ ಕಥೆಯಾಗಿರುವ ರಾಜ್ಯದ ರಾಜಕೀಯ ಪ್ರಹಸನವು ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಮುಂಬೈ ಸೇರಿದವರ ಮುನಿಸು ಕರಗುತ್ತಿಲ್ಲ, ರಾಜ್ಯ ನಾಯಕರ ಯತ್ನ ನಿಲ್ಲುತ್ತಿಲ್ಲ. ಈ ವೇಳೆ ರಾಜೀನಾಮೆ ನೀಡಿ ಅತೃಪ್ತರಾಗಿ ಹೋದವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. 

ರಾಜೀನಾಮೆ ನೀಡಿ ಹೋದವರ ವಿರುದ್ಧ ಗರಂ ಆಗಿರುವ ದಿನೇಶ್ ಗುಂಡೂರಾವ್, ಅವರೆಲ್ಲಾ ಅನರ್ಹತೆಗೊಳ್ಳುವ ಎಲ್ಲಾ ಕೆಲಸ ಮಾಡಿ ಹೋಗಿದ್ದಾರೆ. ಬೆಳೆಸಿದ, ಅಧಿಕಾರ ನೀಡಿದ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು. 

ತಮ್ಮದೇ ಸರ್ಕಾರ ಉರುಳಿಸುವ ಯತ್ನ ಮಾಡಿರುವ ರಾಜೀನಾಮೆ ನೀಡಿರುವ ಶಾಸಕರು ಹಣ, ಅಧಿಕಾರದ ಆಸೆಗೆ ದ್ರೋಹ ಮಾಡಿ ಬೇರೆ ಪಕ್ಷ ಸೇರುವ ಯತ್ನ ಮಾಡಿದ್ದಾರೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಿಂದ ಅವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದೇ ರೀತಿ ಕೈಗೊಳ್ಳುತ್ತೇವೆ. ಈ ಬಗ್ಗೆ ತ್ರಿತವಾಗಿ ನಿರ್ಧಾರ ಕೈಗೊಳ್ಳಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಮನವಿ ಮಾಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು