‘ಸಂಜೆ ಒಳಗೆ ಮುಂದಿನ ಸಿಎಂ ಯಾರೆಂದು ನಿರ್ಧಾರ’

By Web DeskFirst Published Jul 23, 2019, 1:21 PM IST
Highlights

ವಿಶ್ವಾಸಮತದ ನಾಟಕ ಮುಂದುವರಿದಿದೆ. ರಾಜ್ಯದಲ್ಲಿ ಇತ್ತ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಾಯಕರ ನಡುವೆ ನಾನು ಕೊಡೆ ನೀನು ಬಿಡೆ ಎನ್ನುವಂತಾಗಿದೆ. ಆದರೆ ಬಿಜೆಪಿಗರು ಇಂದು ಇದೆಲ್ಲಾ ಕೊನೆಯಾಗಲಿದೆ ಎನ್ನುವ 100 ಪರ್ಸೆಂಟ್ ವಿಶ್ವಾಸದಲ್ಲಿದ್ದಾರೆ.

ಬೆಂಗಳೂರು [ಜು.23] :  ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಡುತ್ತಿರುವ ವಿಶ್ವಾಸಮತದ ಬೃಹನ್ನಾಟಕ ಮುಗಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಆದರೆ ಇಂದೇ ಕೊನೆಯ ದಿನ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಮುಖಂಡರಿದ್ದಾರೆ. 

ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ಪಡೆಗಳು ಸರ್ಕಸ್ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಹೊಸ ಮುಖ್ಯಮಂತ್ರಿ ಬಗ್ಗೆ ಚಿಂತನೆ ನಡೆಸಿದ್ದಾರೆ. 

ಯಾವುದೇ ಸಂಶಯ ಇಲ್ಲದೇ ಇವತ್ತೇ ಎಲ್ಲಾ ಪ್ರಕ್ರಿಯೆಗಳು ಮುಗಿದು ಹೋಗಲಿವೆ. ಯಾರಿಗೆ ಬಹುಮತ, ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವುದು ಖಚಿತವಾಗಲಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಹೇಳಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

100 ಅಲ್ಲ 1000 ಪರ್ಸೆಂಟ್ ಇಂದೇ ಎಲ್ಲಾ ಡ್ರಾಮಾಗೂ ತೆರೆ ಬೀಳಲಿದೆ. ಸಿಎಂ ಇನ್ನೂ ಕಲಾಪಕ್ಕೆ ಹಾಜರಾಗಿಲ್ಲ. ಇದರ ಅರ್ಥ ಅವರು ಸೋತಿದ್ದಾರೆ ಎನ್ನುವುದೇ ಆಗಿದೆ. 

ಫುಟ್ಬಾಲ್ ಆಟದಲ್ಲಿ ಕೀಪರ್ ಇಲ್ಲದಂತೆ ಆಗಿದೆ ಮೈತ್ರಿ ಪಾಳಯದ ಪರಿಸ್ಥಿತಿ. ಇದರಿಂದ ಬಿಜೆಪಿ ಪಾಳಯ ಫ್ರೀ ಆಗಿ ಗೋಲ್ ಹೊಡೆಯಲು ಅವಕಾಶವಿದೆ ಗೆಲ್ಲುವ ವಿಶ್ವಾಸದಲ್ಲಿ ಪದ್ಮನಾಭನಗರ ಶಾಸಕರೂ ಆಗಿರುವ ಬಿಜೆಪಿ ನಾಯಕ ಅಶೋಕ್ ಇದ್ದಾರೆ. 

ಸದ್ಯ ಬಿಜೆಪಿ ಮುಖ್ಯಮಂತ್ರಿ ರೇಸ್ ನಲ್ಲಿ ಬಿ.ಎಸ್.ಯಡಿಯೂರಪ್ಪ ಇದ್ದು, ಆದರೆ ಅಶೋಕ್ ಹೇಳಿಕೆಯು ಸಿಎಂ ಹುದ್ದೆ ಆಕಾಂಕ್ಷಿಗಳ ಸಂಖ್ಯೆ ಬಿಜೆಪಿಯಲ್ಲಿದೆ ಎನ್ನುವ ಶಂಕೆಯೊಂದು ಸುಳಿಯುವಂತಾಗಿದೆ. 

click me!