9 ಐಎಎಸ್​ ಅಧಿಕಾರಿಗಳ ದಿಢೀರ್ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

By Web DeskFirst Published Jun 17, 2019, 10:26 PM IST
Highlights

ನಿನ್ನೆ ಅಷ್ಟೇ ಪೊಲೀಸ್​​​​​​ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ರಾಜ್ಯ ಮೈತ್ರಿ ಸರ್ಕಾರ, ಇಂದು 12 ಐಪಿಎಸ್​​ ಅಧಿಕಾರಿಗಳನ್ನು ವಗಾರ್ವಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು, [ಜೂ.17]: 12 ಐಪಿಎಸ್​​ ಅಧಿಕಾರಿಗಳನ್ನು ವಗಾರ್ವಣೆ ಮಾಡಿದ್ದ ಬೆನ್ನಲ್ಲೆ ರಾಜ್ಯ ಸರ್ಕಾರ ಇಂದು [ಸೋಮವಾರ] 9 ಐಎಎಸ್​​ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಆದೇಶ ಹೊರಡಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ರಾಕೇಶ್​​ ಸಿಂಗ್​​​​ ವಿರುದ್ಧ ಹಲವು ಶಾಸಕರು ಅಸಮಧಾನ ವ್ಯಕ್ತಪಡಿಸುವ ಮೂಲಕ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಒತ್ತಡ ಹಾಕಿದ್ದರು. ಈ ಹಿನ್ನೆಲೆ ಅವರನ್ನು ವರ್ಗಾವಣೆ ಮಾಡಲಾಗಿದೆ. 

ಪಿ. ರವಿಕುಮಾರ್​, ಮಹೇಂದ್ರ ಜೈನ್​​, ಬಿ.ಎಚ್​​. ಅನಿಲ್​​ ಕುಮಾರ್​, ಪ್ರಿಯಾಂಕ ಮೇರಿ ಫ್ರಾನ್ಸಿಸ್​, ಎಸ್​.ಎಸ್​ ನಕುಲ್​, ಡಾ. ವಿ.ರಾಮ್​​ ಪ್ರಶಾಂತ್​ ಮನೋಹರ್​, ಜಿ.ಸಿ. ವೃಷಭೇಂದ್ರ ಮೂರ್ತಿ ಅವರು ವರ್ಗಾವಣೆಯಾಗಿದ್ದಾರೆ.

 ಪಿ.ರವಿಕುಮಾರ್ : ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ  ಸರ್ಕಾರದ ಹೆಚ್ಚುವರಿ ನಿರ್ದೇಶಕ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

ಮಹೇಂದ್ರ ಜೈನ್ : ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಇವರನ್ನು ಉನ್ನತ ಶಿಕ್ಷಣ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿಯೂ ನೇಮಕ ಮಾಡಲಾಗಿದೆ.

 ರಾಕೇಶ್ ಸಿಂಗ್:  ಜಲ ಸಂಪನ್ಮೂಲ ಇಲಾಖೆ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ  ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಎನ್.ಮಂಜುಳಾ:  ಪದವಿ ಪೂರ್ವ ಇಲಾಖೆ ಆಯುಕ್ತೆ ಸ್ಥಾನದ ಜತೆಗೆ ಬಿಡಿಎಯ ಆಯುಕ್ತರನ್ನಾಗಿ ಸಹ ನೇಮಿಸಲಾಗಿದೆ. 

ಅತಿ ಸಣ್ಣ, ಸಣ್ಣ, ಮಧ್ಯಮ ವ್ಯಾಪಾರ ಇಲಾಖೆ ನಿರ್ದೇಶಕರಾಗಿದ್ದ ವೃಷಬೇಂದ್ರ ಮೂರ್ತಿ ಅವರನ್ನು ರೇಷ್ಮೆ ಕೃಷಿ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

 ಪ್ರಿಯಾಂಕಾ ಮೇರಿ ಫ್ರಾನ್ಸಿಸ್: ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಯಾವುದೇ ಹುದ್ದೆ ಇಲ್ಲದೆ ಇದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಮಾಹಿತಿ, ಜೀವ ವಿಜ್ಞಾನ ತಂತ್ರಜ್ಞಾನ ವಿಭಾಗದ ನಿರ್ದೇಶಕ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದ ರಾಮ್ ಪ್ರಶಾಂತ್ ಮನೋಹರ್ ಅವರನ್ನು ಉದ್ಯೋಗ ಮತ್ತು ತರಬೇತಿ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಗಿದೆ. 

click me!