ಕರ್ನಾಟಕ ಸ್ವಂತ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ನಿರ್ಬಂಧವಿಲ್ಲ: ತಜ್ಞರ ಅಭಿಪ್ರಾಯ

By Suvarna Web DeskFirst Published Jul 18, 2017, 8:26 PM IST
Highlights

ರಾಷ್ಟ್ರಧ್ವಜದೊಂದಿಗೆ ರಾಜ್ಯಗಳು ತಮ್ಮದೇ ಆದ ಧ್ಯಜವನ್ನು ಹೊಂದಲು ಸಂವಿಧಾನದಲ್ಲಿ ಯಾವುದೇ ನಿರ್ಬಂಧವಿಲ್ಲ. ರಾಜ್ಯಗಳು ತಮ್ಮ ದ್ವಜವನ್ನು ಹೊಂದಬಹುದು, ಅದರಲ್ಲಿ ಏನೂ ತಪ್ಪಿಲ್ಲ,

ನವದೆಹಲಿ: ಕರ್ನಾಟಕ ರಾಜ್ಯವು ತನ್ನದೇ ಆದ ಸ್ವಂತ ಧ್ವಜವನ್ನು ಹೊಂದಬಹುದು, ಆ ನಿಟ್ಟಿನಲ್ಲಿ ಸಂವಿಧಾನದಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್’ನ ಹಿರಿಯ ನ್ಯಾಯವಾದಿ ಹಾಗೂ ಸಂವಿಧಾನ ತಜ್ಞ ಪವಾನಿ ಪರಮೇಶ್ವರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರಧ್ವಜದೊಂದಿಗೆ ರಾಜ್ಯಗಳು ತಮ್ಮದೇ ಆದ ಧ್ಯಜವನ್ನು ಹೊಂದಲು ಸಂವಿಧಾನದಲ್ಲಿ ಯಾವುದೇ ನಿರ್ಬಂಧವಿಲ್ಲ. ರಾಜ್ಯಗಳು ತಮ್ಮ ದ್ವಜವನ್ನು ಹೊಂದಬಹುದು, ಅದರಲ್ಲಿ ಏನೂ ತಪ್ಪಿಲ್ಲ, ಎಂದು ರಾವ್ ಏಎನ್ಐ’ಗೆ ತಿಳಿಸಿದ್ದಾರೆ.

ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವ ಬಗ್ಗೆ ಕಾನೂನಾತ್ಮಕ ಅಂಶಗಳನ್ನು ಅವಲೋಕಿಸಲು ರಾಜ್ಯ ಸರಕಾರವು 9 ಮಂದಿಯ ಸಮಿತಿಯನ್ನು ರಚಿಸಿರುವುದು ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

(ಚಿತ್ರಕೃಪೆ: ಏಎನ್ಐ)

click me!