
ಬೀಜಿಂಗ್(ಜು.18): ಸಿಕ್ಕಿಂ'ನ ವಿವಾದಿತ ಪ್ರದೇಶ ಡೋಕ್ಲಾಮ್'ಗೆ ಸಂಬಂಧಿಸಿದಂತೆ ಹೆಚ್ಚಿನ ಅನಾಹುತವನ್ನು ತಪ್ಪಿಸುವ ಸಲುವಾಗಿ ಭಾರತ ತನ್ನ ಸೈನಿಕರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಚೀನಾ ಎಚ್ಚರಿಕೆ ನೀಡಿದೆ.
ಡೋಕ್ಲಾಮ್ ಬಿಕ್ಕಟ್ಟು ಒಂದು ತಿಂಗಳು ಕಳೆದರೂ ನಿವಾರಣೆಯಾಗದ ಕಾರಣ ಕಳೆದ ವಾರ ಬೀಜಿಂಗ್'ನಲ್ಲಿರುವ ವಿವಿಧ ದೇಶಗಳ ರಾಯಭಾರಿಗಳನ್ನು ಭೇಟಿ ಮಾಡಿ ತನ್ನ ತಾಳ್ಮೆಗೂ ಒಂದು ಮಿತಿಯಿದೆ ಏನು ಬೇಕಾದರೂ ಆಗಬಹುದು ಎಂದು ಸಂದೇಶ ತಿಳಿಸಿದೆ. ಇದರ ಜೊತೆಗೆ ಭಾರತ ಕೂಡ ರಾಯಭಾರಿಗಳಿಗೆ 'ಪರಿಸ್ಥಿತಿ ಗಂಭೀರತೆ ಪಡೆದಿಲ್ಲ ಎಂದು ಮಾಹಿತಿ ತಿಳಿಸಿದೆ ಎನ್ನಲಾಗಿದೆ.
ಚೀನಕ್ಕೆ ನೆರೆಯ ರಾಷ್ಟ್ರಗಳ ಜೊತೆ ಸಂಘರ್ಷ ಮಾಡಲು ಇಷ್ಟವಿಲ್ಲ. ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸುತ್ತದೆ. ಆದರೆ ಸಾರ್ವಭೌಮತೆಯ ಪ್ರಶ್ನೆ ಎದುರಾದಾಗ ಯುದ್ಧಕ್ಕೆ ಸಿದ್ದವಿರುತ್ತದೆ ಎಂದು ಚೀನಾದ ನಿಯತಕಾಲಿಕೆ ‘ಗ್ಲೋಬಲ್ ಟೈಮ್ಸ್’ತನ್ನ ಲೇಖನದಲ್ಲಿ ಪ್ರಕಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.