ಅಂದು ಬೇಕಾದವರು ಇಂದು ಬೇಡಾದರು..ಯೂಸ್ ಆ್ಯಂಡ್‌ ಥ್ರೋ ಪಾಲಿಟಿಕ್ಸ್!

By Web DeskFirst Published Dec 22, 2018, 6:45 PM IST
Highlights

ದೋಸ್ತಿ ಸರಕಾರ ಸಂಪುಟ ಪುನಾರಚನೆಯಾಗಿದೆ. ಕಾಂಗ್ರೆಸ್‌ನ 8 ಶಾಸಕರು ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದಾರೆ. ಆದರೆ ದೋಸ್ತಿ ಸರಕಾರ ನಂಬಿಕೊಂಡು ಬಂದ ಇಬ್ಬರು ಪಕ್ಷೇತರರನ್ನು ಮಾತ್ರ ದೋಸ್ತಿ ಸರಕಾರ ನಡು ನೀರಲ್ಲಿ ಕೈಬಿಟ್ಟಿದೆ.

ಬೆಂಗಳೂರು[ಡಿ.22] ರಾಣಿಬೆನ್ನೂರಿನ ಶಾಸಕ ಶಂಕರ್ ಮತ್ತು ಮುಳಬಾಗಿಲು ಶಾಸಕ ನಾಗೇಶ್ ಕಳೆದ ವಿಧಾನಸಭೆ ಚುನಾವಣಾ ಫಲಿತಾಂಶದ ವೇಳೆ ಪಕ್ಷೇತರರಾಗಿ ಆಯ್ಕೆಯಾಗಿ ಬಂದಿದ್ದರು. 104 ಸ್ಥಾನ ಗಳಿಸಿದ್ದ ಬಿಜೆಪಿ ಸರಕಾರ ರಚನೆಗೆ ಹರಸಾಹಸ ಮಾಡುತ್ತಲೇ ಇತ್ತು.

ಒಂದು ಕಡೆ ಬಿಎಸ್ ಯಡಿಯೂರಪ್ಪ ಹೆಚ್ಚಿನ ಸ್ಥಾನ ಗೆದ್ದ ಪಕ್ಷ ಎಂಬ ಆಧಾರದಲ್ಲಿ ಪ್ರಮಾಣ ವಚನವನ್ನು ತೆಗೆದುಕೊಂಡಿದ್ದರು. ರಾಣೆಬೆನ್ನೂರಿನ ಶಾಸಕ ಆರ್‌. ಶಂಕರ್ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಸಮುದಾಯದವರು ಎಂಬ ಆಧಾರದಲ್ಲಿ ಬಿಜೆಪಿ ಹೈಕಮಾಂಡ್ ಅವರನ್ನು ಕರೆತರುವಂತೆಯೂ ಹೇಳಿತ್ತು. ಆದರೆ ಡಿಕೆ ಶಿವಕುಮಾರ್ ಶಂಕರ್‌ ಅವರನ್ನು ತಮ್ಮ ಜತೆ ಕರೆದುಕೊಂಡು ಹೋಗಿದ್ದರು.

ಯಡಿಯೂರಪ್ಪ ರಾಜೀನಾಮೆ ನೀಡಲು ರಾಜಭವನದ ಬಳಿ ಬಂದಾಗ ಶಿವಕುಮಾರ್ ಅದೇ ಮಾರ್ಗದಲ್ಲಿ ಶಂಕರ್ ಅವರನ್ನು ಕರೆದುಕೊಂಡು ಹೋಗಿದ್ದರು. ಶಂಕರ್‌ ಅವರಿಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು. ಆದರೆ ಈಗ ಕಸಿದುಕೊಳ್ಳಲಾಗಿದೆ. ಇನ್ನು ಮುಳುಬಾಗಿಲು ಶಾಸಕರ ಹೆಸರನ್ನು ಎಲ್ಲೂ ಉಲ್ಲೇಖ ಮಾಡಲಾಗಿಲ್ಲ.

ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಘೋಷಣೆ: ಯಾರಿಗೆ? ಯಾವುದು?

ಬಲ ಹೆಚ್ಚಿಸಿಕೊಂಡ ದೋಸ್ತಿಗಳು: ಉಪಚುನಾವಣೆ ನಡೆದ ಜಮಖಂಡಿ ಮತ್ತು ರಾಮನಗರದಲ್ಲಿ ದೋಸ್ತಿಗಳಿಗೆ ಜಯವಾಗಿತ್ತು. ಜಯನಗರದದಲ್ಲಿಯೂ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಗೆದ್ದಿದ್ದರು. ವೋಟರ್ ಕಾರ್ಡ್ ಸಿಕ್ಕ ಕಾರಣಕ್ಕೆ ಮುಂದಕ್ಕೆ ಹಾಕಿದ್ದ ಚುನಾವಣೆಯಲ್ಲಿ ಅಂದರೆ ರಾಜರಾಜೇಶ್ವರಿ ನಗರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುನಿರತ್ನ ಗೆದ್ದಿದ್ದರು. ಹಾಗಾಗಿ ಪ್ರಕಟವಾಗಿದ್ದ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಸಹಜವಾಗಿಯೇ ದೋಸ್ತಿಗಳ ಬಲ ಹೆಚ್ಚಾಯಿತು. ಇದೇ ಕಾರಣಕ್ಕೆ ಪಕ್ಷೇತರರನ್ನು ದೂರ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ.

ಕಾಂಗ್ರೆಸ್‌ಗೆ ಬನ್ನಿ: ಶಂಕರ್‌ ಅವರಿಗೆ ಕಾಂಗ್ರೆಸ್ ಸೇರಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಆದಿಯಾಗಿ ಕೆಲ ನಾಯಕರು ಕೇಳಿಕೊಂಡಿದ್ದರು. ಆದರೆ ಶಂಕರ್ ಇದಕ್ಕೆ ಒಪ್ಪಿಲ್ಲ. ಈಗ ಅನಿವಾರ್ಯವಾಗಿ ಸಚಿವ ಸ್ಥಾನ ಕಳೆದುಕೊಳ್ಳಬೇಕಿದೆ.

ದೂರವಾದ ಬಿಎಸ್‌ಪಿ: ಬಿಎಸ್‌ಪಿಯ ಮಹೇಶ್ ಸಹ ಸಚಿವರಾಗಿದ್ದರು. ಆದರೆ ಬಿಎಸ್‌ಪಿ ಹಿರಿಯರ ಆಣತಿಗೆ ಬೆಲೆಕೊಟ್ಟು ಅವರು ಸಹ ಸಚಿವ ಸ್ಥಾನ ತೊರೆದಿದ್ದರು.

click me!