
ಬೆಂಗಳೂರು[ಆ.20]: ಬಿ. ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳಾದರೂ ಸಚಿವ ಸಂಪುಟ ರಚನೆ ಮಾತ್ರ ಆಗಿರಲಿಲ್ಲ. ಬಿಎಸ್‌ವೈ ಹಲವಾರು ಬಾರಿ ದೆಹಲಿಗೆ ತೆರಳಿದ್ದರೂ ಹೈ ಕಮಾಂಡ್ ಮಾತ್ರ ಯಾವುದೇ ಹಸಿರು ನಿಶಾನೆ ತೋರಿರಲಿಲ್ಲ. ಹೀಗಿರುವಾಗ ಕಳೆದೆರಡು ದಿನಗಳ ಹಿಂದೆ ಸಂಪುಟ ರಚನೆಗೆ ಇಂದು ಮಂಗಳವಾರ ದಿನಾಂಕ ಫಿಕ್ಸ್ ಆಗಿದ್ದು, ಸಚಿವರಾಗುವವರು ಯಾರು ಎಂಬುವುದು ಮಾತ್ರ ನಿಗೂಢವಾಗಿಯೇ ಇತ್ತು. ಸದ್ಯ ಕೊನೆಗೂ ಸಚಿವರಾಗುವವರ ಪಟ್ಟಿ ಲಭ್ಯವಾಗಿದ್ದು, ಒಟ್ಟು 17 ಶಾಸಕರಿಗೆ ಮಂತ್ರಿ ಭಾಗ್ಯ ದೊರಕಿದೆ. ಇಲ್ಲಿದೆ ಮಂತ್ರಿಯಾಗುವವರ ಫೈನಲ್ ಪಟ್ಟಿ
*ಗೋವಿಂದ ಕಾರಜೋಳ - ಮುಧೋಳ - ದಲಿತ ಎಡ
*ಡಾ.ಸಿ.ಎನ್.ಅಶ್ವತ್ಥ್ ನಾರಾಯಣ - ಮಲ್ಲೇಶ್ವರಂ - ಒಕ್ಕಲಿಗ
*ಲಕ್ಷ್ಮಣ್ ಸವದಿ - ಲಿಂಗಾಯತ
*ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ ನಗರ - ಕುರುಬ
*ಆರ್.ಅಶೋಕ್ - ಪದ್ಮನಾಭನಗರ - ಒಕ್ಕಲಿಗ
*ಜಗದೀಶ್ ಶೆಟ್ಟರ್ - ಹುಬ್ಬಳ್ಳಿ-ಧಾರವಾಡ ಕೇಂದ್ರ - ಲಿಂಗಾಯತ
*ಬಿ.ಶ್ರೀರಾಮುಲು - ಮೊಳಕಾಲ್ಮೂರು - ವಾಲ್ಮೀಕಿ
*ಎಸ್.ಸುರೇಶ್ ಕುಮಾರ್ - ರಾಜಾಜಿನಗರ - ಬ್ರಾಹ್ಮಣ
*ವಿ.ಸೋಮಣ್ಣ - ಗೋವಿಂದರಾಜನಗರ - ಲಿಂಗಾಯತ
*ಸಿ.ಟಿ.ರವಿ - ಚಿಕ್ಕಮಗಳೂರು - ಒಕ್ಕಲಿಗ
*ಬಸವರಾಜ್ ಬೊಮ್ಮಾಯಿ - ಶಿಗ್ಗಾಂವಿ - ಲಿಂಗಾಯತ
*ಕೋಟ ಶ್ರೀನಿವಾಸ್ ಪೂಜಾರಿ - ಎಂಎಲ್ ಸಿ - ಈಡಿಗ
*ಜೆ.ಸಿ.ಮಾಧುಸ್ವಾಮಿ - ಚಿಕ್ಕನಾಯಕನಹಳ್ಳಿ - ಲಿಂಗಾಯತ
*ಸಿ.ಸಿ.ಪಾಟೀಲ್ - ನರಗುಂದ - ಲಿಂಗಾಯತ
*ಎಚ್.ನಾಗೇಶ್ - ಮುಳಬಾಗಿಲು - ದಲಿತ ಎಡ
*ಪ್ರಭು ಚೌಹಾಣ್ - ಔರಾದ್ - ಲಂಬಾಣಿ
*ಶಶಿಕಲಾ ಜೊಲ್ಲೆ - ನಿಪ್ಪಾಣಿ - ಪಂಚಮಸಾಲಿ ಲಿಂಗಾಯತ
ಮಂತ್ರಿಯಾಗುವ 17 ಮಂದಿ ಶಾಸಕರ ಪಟ್ಟಿ ಫೈನಲ್ ಆಗಿದ್ದರೂ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಮಂತ್ರಿಗಿರಿ ಪಡೆಯಲು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.