ಬಿಎಸ್‌ವೈ ಮಾಸ್ಟರ್ ಸ್ಟ್ರೋಕ್.. ಸಿಬಿಐ ತನಿಖೆ ದಿನಾಂಕ ಕೊಟ್ಟ ಶಾಕ್

By Web DeskFirst Published Aug 19, 2019, 11:07 PM IST
Highlights

ದೋಸ್ತಿ ಸರ್ಕಾರದ ಕಾಲಾವಧಿಯ ವೇಳೆ ಪೋನ್ ಟ್ಯಾಪಿಂಗ್ ಸಿಬಿಐಗೆ/ ಯಾರು ಯಾರಿಗೆ ಈ ಪ್ರಕರಣ ಕುಣಿಕೆಯಾಗುತ್ತೆ? ರಾಜ್ಯ ಸರ್ಕಾರದ ದಿಟ್ಟ ನಿರ್ಧಾರದ ಹಿಂದೆ ಯಾರಿದ್ದಾರೆ?

ಬೆಂಗಳೂರು[ಆ. 19]  ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿ ಅಧಿಕೃತ ಆದೇಶ ಹೊರಡಿಸಿದೆ. ಆದರೆ ಇಲ್ಲಿಗೆ  ಇದು ಮುಗಿಯುವುದಿಲ್ಲ... ದಿನಾಂಕ ಎಲ್ಲಿಂದ ಎನ್ನುವುದು ಸಹ ಅಷ್ಟೇ ಮುಖ್ಯವಾಗುತ್ತದೆ.

ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ವಹಿಸಬೇಕು. 2018ರ ಆಗಸ್ಟ್ 1ರಿಂದ ಇಲ್ಲಿಯವರೆಗಿನ ಫೋನ್ ಟ್ಯಾಪಿಂಗ್ ವಿವರಗಳನ್ನು ಸಲ್ಲಿಸಬೇಕು. ಆಡಳಿತ ಮತ್ತು ಪ್ರತಿ ಪಕ್ಷಗಳ ನಾಯಕರು, ಅವರ ಸಹವರ್ತಿಗಳು, ಸರ್ಕಾರಿ ನೌಕರರ ಕರೆ ವಿವರಗಳ ಸಲ್ಲಿಸಬೇಕು ಎಂದು ಗೃಹ ಇಲಾಖೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ. 

2018ರ ಆಗಸ್ಟ್ 1ರಿಂದ ಎನ್ನುವ ದಿನಾಂಕ ಬಹಳ ಮುಖ್ಯವಾಗಿದೆ. ಮೇ 23, 2018 ರಂದು ಎಚ್‌.ಡಿ.ಕುಮಾರಸ್ವಾಮಿ ದೋಸ್ತಿ ಸರ್ಕಾರದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಅಂದರೆ ಈಗ ಆದೇಶ ನೀಡಿರುವುದು ಆಗಸ್ಟ್ 1, 2018 ಅಂದರೆ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿ 3 ತಿಂಗಳ ನಂತರದಿಂದ ಇಲ್ಲಿಯವರೆಗೆ. 

click me!