ಒಂದು ಕಡೆ ದೇಶಾದ್ಯಂತ ಮೀ ಟೂ ಅಭಿಯಾನ ಸದ್ದು ಮಾಡುತ್ತಿದ್ದರೆ ಕರ್ನಾಟಕದ ಬಳ್ಳಾರಿಯಲ್ಲಿ ಬಿಜೆಪಿ ನಾಯಕರೊಬ್ಬರ ರಾಸಲೀಲೆ ಪ್ರಕರಣ ಬಯಲಾಗಿದೆ. ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಲಾಗಿದ ಎಎಂದು ಯುವತಿ ಆರೋಪ ಮಾಡಿದ್ದು ವಿಡಿಯೋ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ.
ಬಳ್ಳಾರಿ[ಅ.15] ಬಿಜೆಪಿ ಮುಖಂಡನೊಬ್ಬನ ಲೈಂಗಿಕ ಹಗರಣ ಬೆಳಕಿಗೆ ಬರುವ ಮೂಲಕ ಲೋಕಸಭಾ ಉಪಚುನಾವಣೆಯಲ್ಲಿ ಗುಂಗಲ್ಲಿರುವ ಬಳ್ಳಾರಿ ಬಿಜೆಪಿ ನಾಯಕರಿಗೆ ಮುಜುಗರ ಉಂಟಾಗಿದೆ. ಕಾನಹೊಸಳ್ಳಿ ಮೂಲದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಾನಮಡುಗು ತಿಪ್ಪೇಸ್ವಾಮಿ ಎನ್ನುವವರು ಕೆಲಸ ಕೊಡಿಸೋದಾಗಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ
ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ವಿವಿಧ ವಿದ್ಯಾಸಂಸ್ಥೆ ಹೊಂದಿರುವ ತಿಪ್ಪೇಸ್ವಾಮಿ ಈ ರೀತಿ ಹಲವು ಕೃತ್ಯ ಮಾಡಿದ್ದಾರೆಂದು ಯುವತಿ ಆರೋಪಿಸಿದ್ದಾಳೆ. ತಮ್ಮ ಐಟಿಐ ಕಾಲೇಜಿನಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ತನ್ನ ಜೊತೆ ಸಹಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೆಲಸ ಸಿಗುತ್ತದೆ ಅನ್ನೋ ಕಾರಣಕ್ಕೆ ಯುವತಿ ಒಪ್ಪಿದ್ದಾಳೆ. ಆದ್ರೇ ಅತ್ತ ಕೆಲಸವನ್ನು ನೀಡದೇ, ಇತ್ತ ಲೈಂಗಿಕವಾಗಿ ಬಳಸಿಕೊಳ್ಳೊ ಮೂಲಕ ಅನ್ಯಾಯ ಮಾಡಿದ್ದಾರೆಂದು ಯುವತಿ ಆರೋಪಿಸಿದ್ದಾಳೆ.
ಆರೋಪಿ ಶಾಸಕ ಎನ್.ವೈ. ಗೋಪಾಲ ಕೃಷ್ಣ ಬೆಂಬಲಿಗರಾಗಿದ್ದು ಇದೀಗ ಬಿಜೆಪಿಗೆ ಇರಿಸು ಮುರಿಸು ಉಂಟಾಗಿದೆ.