#MeToo ಅಬ್ಬರದ ನಡುವೆಯೇ ಪ್ರಶಂಸೆಗೆ ಪಾತ್ರವಾದ ಡ್ರೈವರ್

Published : Oct 15, 2018, 05:12 PM ISTUpdated : Oct 15, 2018, 05:14 PM IST
#MeToo ಅಬ್ಬರದ ನಡುವೆಯೇ ಪ್ರಶಂಸೆಗೆ ಪಾತ್ರವಾದ ಡ್ರೈವರ್

ಸಾರಾಂಶ

ಸದ್ಯ ಎಲ್ಲೆಡೆ  #MeToo ಅಭಿಯಾನ ಸದ್ದು ಮಾಡುತ್ತಿದ್ದರೆ  ಇಲ್ಲೋರ್ವ ಕ್ಯಾಬ್ ಚಾಲಕನ ಕಾರ್ಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದೆ. 

ನವದೆಹಲಿ :  ಸದ್ಯ ಎಲ್ಲೆಡೆ  #MeToo ಅಭಿಯಾನ ಸದ್ದು ಮಾಡುತ್ತಿದ್ದರೆ ಇತ್ತ ಇಲ್ಲೋರ್ವ ಕ್ಯಾಬ್ ಚಾಲಕನ ಕಾರ್ಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದೆ. 

ಸಂತೋಷ್ ಎನ್ನುವ ಉಬರ್ ಕ್ಯಾಬ್ ಚಾಲಕ ಪ್ರಿಯಾಸ್ಮಿತಾ ಗುಹಾ ಮತ್ತು ಆಕೆಯ ತಾಯಿಯನ್ನು ಅವರ ಸ್ಥಳಕ್ಕೆ ಡ್ರಾಪ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಅವರು ತೆರಳಬೇಕಿದ್ದ ಸ್ಥಳದಲ್ಲಿ ಗೇಟ್ ಬಂದ್ ಮಾಡಲಾಗಿತ್ತು. 

ಸುತ್ತಮುನ್ನ ಯಾರೂ ಕೂಡ ಇಲ್ಲದ ಈ ಸ್ಥಳದಲ್ಲಿ ಇಬ್ಬರನ್ನೇ  ಬಿಟ್ಟು ಬರುವುದು ಸೂಕ್ತವಲ್ಲವೆಂದು ಅರಿತ ಕ್ಯಾಬ್ ಚಾಲಕ ಒಂದೂವರೆ ಗಂಟೆಗಳ ಕಾಲ ಅವರಿಬ್ಬರಿಗಾಗಿ ಸ್ಥಳದಲ್ಲಿಯೇ ಕಾಯ್ದು ಮಧ್ಯ ರಾತ್ರಿ ಅವರನ್ನು ಸುರಕ್ಷಿತವಾಗಿ ಸೇರಬೇಕಾದ ಸ್ಥಳಕ್ಕೆ ಸೇರಿಸಿ ಬಂದಿದ್ದಾರೆ. 

ಬೇರೆ ಪ್ರಯಾಣಿಕರು ಕ್ಯಾಬ್ ಬುಕ್ ಮಾಡಲು ಯತ್ನಿಸಿದ್ದರೂ ಅವರಿಗೆ ಬುಕಿಂಗ್ ಕ್ಯಾನ್ಸಲ್ ಮಾಡುವ ಮೂಲಕ ತಾಯಿ ಮಗಳನ್ನು ಕಾದು ಬಂದಿದ್ದಾರೆ. 

ಮಧ್ಯ ರಾತ್ರಿ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಈ ಬಗ್ಗೆ ಸ್ವತಃ ಸ್ಮಿತಾ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು , #Me Too ನಡೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಗಣತಿ!