
ಬೆಂಗಳೂರು[ಅ.25] ರಾಜ್ಯದಲ್ಲಿ ಬಿಜೆಪಿ ಭದ್ರವಾಗಿದೆ. ಹೆಚ್ಚು ಲೋಕಸಭೆ ಸ್ಥಾನಗಳನ್ನ ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿ ಮಾಡುತ್ತೇವೆ. ಯಡಿಯೂರಪ್ಪ ಸಿಎಂ ಆಗಬಾರದು ಅಂತಾ 37 ಸ್ಥಾನ ಪಡೆದು ಕಾಂಗ್ರೆಸ್ ಜೊತೆ ಕೈಜೊಡಿಸಿ ಸರ್ಕಾರ ನಡೆಸ್ತಿದ್ದೀರಾ? ನೀವು ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿಸೋಕೆ ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಶ್ರೀರಾಮುಲು ಅವರನ್ನು 420 ಎಂದು ಕರೆದಿದ್ದರೆ. ತುಂಬಾ ಹಗುರವಾಗಿ ಮಾತನಾಡುದ್ದಾರೆ. ನವೆಂಬರ್ 6 ರಂದು ಫಲಿತಾಂಶ ಬಂದ ಬಳಿಕ ಅವರಿಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಮೈತ್ರಿ VS ಬಿಜೆಪಿ ; 5 ಕ್ಷೇತ್ರದ ಅಖಾಡದಲ್ಲಿ ಯಾರೆಲ್ಲ ಇದ್ದಾರೆ?
ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ಸಿದ್ಧವಾಗಿದೆ. ಹಾಗಾದರೆ ಯಾವೆಲ್ಲ ಘಟಾನುಘಟಿಗಳು ಅಖಾಡಲ್ಲಿದ್ದಾರೆ. ಸಮರ, ವಾಕ್ಸಮರ, ಸೆಂಟಿಮೆಂಟ್, ಜಾತಿ ಅಸ್ತ್ರ, ಅಪ್ಪನ ಸೇಡು, ಅಕ್ಕನ ಸೇಡು, ಮನೆ ಮಗ, ಮನೆ ಮಗಳು, ಸ್ಥಳೀಯ ಅಡ್ರೆಸ್ ಇಲ್ಲ... ಹೀಗೆ ಸಾಕಷ್ಟು ಬೇಕಿರದ, ಬೇಕಾಗದ ವಿಚಾರಗಳು ಚುನಾವಣಾ ಅಖಾಡದಲ್ಲಿ ಮೊಳಗುತ್ತಿದೆ. 3 ಲೋಕ ಸಭೆ ಮತ್ತು 2 ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಆಯಾ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ರಂಗೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.