827 ಪೋರ್ನ್ ಸೈಟ್ ಬ್ಯಾನ್ ಮಾಡಲು ಸೂಚನೆ

By Web DeskFirst Published Oct 25, 2018, 2:56 PM IST
Highlights

827 ಪೋರ್ನ್  ಸೈಟ್ ಗಳನ್ನು ಬ್ಯಾನ್ ಮಾಡಬೇಕು ಎಂದು ಇಂಟರ್ನೆಟ್  ಸೇವೆ ಪೂರೈಕೆದಾರರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 
 

ನವದೆಹಲಿ :  ಒಟ್ಟು 827 ಪೋರ್ನ್  ಸೈಟ್ ಗಳನ್ನು ಬ್ಯಾನ್ ಮಾಡಬೇಕು ಎಂದು ಇಂಟರ್ನೆಟ್  ಸೇವೆ ಪೂರೈಕೆದಾರರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 

ಉತ್ತರಾಖಂಡ್ ಕೋರ್ಟ್ ನೀಡಿದ ಆದೇಶಕ್ಕೆ ಅನುಗುಣವಾಗು ಪೋರ್ನೊಗ್ರಫಿಯನ್ನು ಹೊಂದಿದ ಸೈಟ್ ಗಳ ಬ್ಯಾನ್ ಮಾಡಲು ಸೂಚನೆ ನೀಡಲಾಗಿದೆ. 

ಆದೇಶದಲ್ಲಿ ನೀಡಲಾದ ಎಲ್ಲಾ ಸೆಯಟ್ಗಳನ್ನು ಬ್ಯಾನ್ ಮಾಡಲು ಇದೀಗ ಟೆಲಿಕಾಂ ಡಿಪಾರ್ಟ್ ಮೆಂಟ್ ನಿರ್ಧಾರ ಮಾಡಿದೆ. 

ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಇಂಟರ್ನೆಟ್ ಸೇವೆಯನ್ನು ಒದಗಿಸುವ ಲೈಸೆನ್ಸ್ ದಾರರಿಗೆ ಸೂಚನೆ ನೀಡಲಾಗಿದೆ. 

ಉತ್ತರಾಖಂಡ್ ಈ ಬಗ್ಗೆ ಸೆಪ್ಟೆಂಬರ್ 27 ರಂದೇ ಆದೇಶ ನೀಡಿದ್ದು, ಈ ಬಗ್ಗೆ ಅಕ್ಟೋಬರ್ 9ರಂದು ಆದೇಶದ ಪ್ರತಿಯನ್ನು ಸ್ವೀಕರಿಸಿದ್ದು  ಇದೀಗ ತುರ್ತಾಗಿ ಈ ಸೈಟ್ ಗಳನ್ನು ಬ್ಯಾನ್ ಮಾಡಲು ಸೂಚಿಸಲಾಗಿದೆ. 

click me!