13 ಶಾಸಕರ ರಾಜೀನಾಮೆ? ಹೀಗಾಗಲಿದೆ ಸರ್ಕಾರದ ನಂಬರ್ ಗೇಮ್

By Web DeskFirst Published Jul 6, 2019, 12:03 PM IST
Highlights

ಕಳೆದ ವಾರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ಬೆನ್ನಲ್ಲೇ, ಇಂದು (ಶನಿವಾರ) ಮೈತ್ರಿ ಸರ್ಕಾರದ 13 ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ರಾಜೀನಾಮೆ ಕೊಟ್ಟರೆ ಸದನದ ಬಲಾಬಲ ಏನಾಗಲಿದೆ? ಸರ್ಕಾರದ ಭವಿಷ್ಯ ಏನಾಗಲಿದೆ? ಇಲ್ಲಿದೆ ಲೆಕ್ಕ  
 

ಬೆಂಗಳೂರು (ಜು.06): ಮೈತ್ರಿ ಸರ್ಕಾರದ 13 ಶಾಸಕರು ರಾಜೀನಾಮೆ ನೀಡಲು ಸಿದ್ಧವಾಗಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. 

ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಯಾರೂ ಊಹಿಸಲೂ ಸಾಧ್ಯವಾಗದ ಹಲವು ಘಟಾನುಘಟಿ ಶಾಸಕರು ರಾಜೀನಾಮೆ ನೀಡಲು ಸಜ್ಜಾಗಿದ್ದು, ಸ್ಪೀಕರ್ ಭೇಟಿಯಾಗಲು ಹೊರಟಿದ್ದಾರೆ. 

ಅಮೆರಿಕಾ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ರಾಜ್ಯಕ್ಕೆ ವಾಪಾಸಾಗುವಷ್ಟರಲ್ಲಿ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿವೆ.

ಹಾಗಾದರೆ 13 ಮಂದಿ ಶಾಸಕರ ರಾಜೀನಾಮೆಯಿಂದ ಸದನದ ಬಲಾಬಲ ಏನಾಗಲಿದೆ? ಇಲ್ಲಿದೆ ವಿವರ:

ಸದನದ ಒಟ್ಟು ಬಲ: 224

ಬಿಜೆಪಿ: 105
ಕಾಂಗ್ರೆಸ್: 79
ಜೆಡಿಎಸ್ 38
ಪಕ್ಷೇತರ: 2

ಒಟ್ಟು ರಾಜೀನಾಮೆ ಸಂಖ್ಯೆ: 14

ಬಿಜೆಪಿ: 105
ಕಾಂಗ್ರೆಸ್: 79-12= 67
ಜೆಡಿಎಸ್: 38-2=36
ಪಕ್ಷೇತರರು: 2

ರಾಜೀನಾಮೆ ಬಳಿಕ ಸದನದ ಬಲ: 210
ಬಹುಮತ ಸಾಬೀತಿಗೆ ಮ್ಯಾಜಿಕ್ ನಂಬರ್: 106

ಹಾಗಾಗಿ ಸರ್ಕಾರ ರಚಿಸಲು ಬಿಜಪಿಗೆ 1 ಶಾಸಕರ ಕೊರತೆ ಎದುರಾಗಲಿದೆ. ಪಕ್ಷೇತರ ಶಾಸಕ ಅಥವಾ BSP ಶಾಸಕರೊಬ್ಬರು ಬೆಂಬಲ ಕೊಟ್ಟರೆ ಬಿಜೆಪಿ ಸುಲಭವಾಗಿ ಸರ್ಕಾರ ರಚಿಸುವ ಸಾಧ್ಯತೆ ಇದೆ. 

click me!