ಬೆಂಗಳೂರಿನಲ್ಲಿ 3-4 ದಿನ ಬಿರುಸು ಮಳೆ ಸಾಧ್ಯತೆ

By Web DeskFirst Published Jul 6, 2019, 10:00 AM IST
Highlights

ಮುಂದಿನ ಮೂರ‌್ನಾಲ್ಕು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಮಳೆ ಬಿರುಸುಗೊಳ್ಳುವ ಸಾಧ್ಯತೆ | ನಗರದ ಹೊರ ವಲಯದಲ್ಲಿ ಅಲ್ಲಲ್ಲಿ ಮಳೆ 

ಬೆಂಗಳೂರು (ಜು. 06): ಉದ್ಯಾನ ನಗರಿಯ ಹಲವೆಡೆ ತುಂತುರು ಹಾಗೂ ವಿವಿಧೆಡೆ ಶುಕ್ರವಾರ ಹಗುರ ಮಳೆಯಾಗಿದೆ. ಇದರಿಂದ ಆರಂಭದಿಂದಲೂ ಮೋಡ ಕವಿದ ವಾತಾವರಣದಲ್ಲಿದ್ದ ಮುಂಗಾರು ಇದೀಗ ನಗರದಲ್ಲೂ ಮಳೆಯ ಸಿಂಚನ ಆರಂಭ ಆದಂತಾಗಿದೆ.

ಮುಂದಿನ ಮೂರ‌್ನಾಲ್ಕು ದಿನಗಳ ಕಾಲ ನಗರದಲ್ಲೂ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ. ಶುಕ್ರವಾರ ಬೆಳಗ್ಗೆಯಿಂದಲೇ ನಗರದಲ್ಲಿ ದಟ್ಟ ಮೋಟಗಳ ವಾತಾವಾರಣ ಕಂಡುಬಂದಿತ್ತು. ಸಂಜೆ ಹಾಗೂ ರಾತ್ರಿ ನಗರದ ಹೃದಯ ಭಾಗ ಹಾಗೂ ದಕ್ಷಿಣ ಭಾಗದ ವಿವಿಧ ಪ್ರದೇಶಗಳಲ್ಲಿ ಹಗುರ ಹಾಗೂ ಹೊರವಲಯದ ಹಲವೆಡೆ ತುಂತುರು ಮಳೆಯಾಗಿದೆ. ಅಗ್ರಹಾರ ದಾಸರಹಳ್ಳಿಯಲ್ಲಿ 6 ಮಿ.ಮೀ., ಚಾಮರಾಜಪೇಟೆಯಲ್ಲಿ 5.5 ಸಂಪಂಗಿ ರಾಮನಗರ 4.5 ಕೊಡಿಗೇಹಳ್ಳಿಯಲ್ಲಿ 3.5 ಮಿ.ಮೀ ಮಳೆ ಬಿದ್ದಿದೆ.

ಇನ್ನು ಕೊಟ್ಟಿಗೆಪಾಳ್ಯ, ನಾಗರಬಾವಿ, ರಾಜ ರಾಜೇಶ್ವರಿ ನಗರ, ಹೆಮ್ಮಿಗೇಪುರ, ರಾಮೋಹಳ್ಳಿ, ಎಚ್‌ಎ ಎಲ್, ಕೋಣನಕುಂಟೆ, ಬನಶಂಕರಿ, ಬಾಗಲೂರು, ದೊಡ್ಡ ನೆಕ್ಕುಂದಿ, ಎಚ್‌ಎಸ್.ಆರ್. ಲೇಔಟ್ ಸೇರಿದಂತೆ ವಿವಿಧೆಡೆ ಕನಿಷ್ಠ 1 ಮಿ.ಮೀ.ನಿಂದ 2.5 ಮಿ.ಮೀ. ವರೆಗೆ ಮಳೆ ಬಿದ್ದಿದೆ. ಇನ್ನೂ ಕೆಲ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಮುಂದಿನ 3-4 ದಿನಗಳ ಕಾಲ ನಗರದಲ್ಲೂ ಮುಂಗಾರು ಮಳೆ ಕೊಂಚ ಬಿರುಸಾಗಲಿದೆ. ಬಹುತೇಕ ಭಾಗಗಳಲ್ಲಿ ಸಾಧಾರಣ ಹಾಗೂ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿಸಿದೆ.

 

click me!