ದ್ವಿತೀಯ ಪಿಯು ರಿಸಲ್ಟ್ ಡೇಟ್ ಫಿಕ್ಸ್, ಸಿಇಟಿಗೂ ಮುನ್ನವೇ ಫಲಿತಾಂಶ ವಿಶೇಷ

By Web DeskFirst Published Apr 12, 2019, 7:21 PM IST
Highlights

ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಏ. 15 ರಂದು ಪ್ರಕಟವಾಗಲಿದೆ. , ಏ.16ರ ಬೆಳಿಗ್ಗೆಯಿಂದ ಎಲ್ಲ ಕಾಲೇಜುಗಳಲ್ಲೂ ಫಲಿತಾಂಶ ಲಭ್ಯವಾಗಲಿದೆ.

ಬೆಂಗಳೂರು[ಏ.12] 2018-19ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಏ.15ರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಶುಕ್ರವಾರ ಮಾಹಿತಿ ನೀಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ವೆಬ್ ತಾಣಗಳಲ್ಲಿಯೂ ಫಲಿತಾಂಶ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 15 ( ಸೋಮವಾರ) ಬೆಳಗ್ಗೆ 11ಗಂಟೆಗೆ pue.kar.nic.in ಹಾಗೂ karresults.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.  ಏ.17 ಮತ್ತು 19ರಂದು ಸರಕಾರಿ ರಜೆಯಿದ್ದು ಏ.18ರಂದು ಲೋಕಸಭಾ ಚುನಾವಣೆ ನಡೆಯಲಿದೆ.  ಹಾಗಾಗಿ ಏ.16ರಂದೇ ಫಲಿತಾಂಶ ಪ್ರಕಟಿಸುವ ನಿರ್ಧಾರಕ್ಕೆ ಬರಲಾಗಿದೆ  ಎನ್ನಲಾಗಿದೆ.

ನಿಮ್ಮ ಕ್ಷೇತ್ರದ ಅಭ್ಯರ್ಥಿ ಓದಿದ್ದೇನು? ಇಲ್ಲಿದೆ ವಿವರ

ಸಿಇಟಿಗೂ ಮುನ್ನವೇ ಪಿಯು ಫಲಿತಾಂಶ:  ಏ.29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಆದರೆ ಈ ಸಾರಿ ಅದಕ್ಕೂ ಮುನ್ನವೇ ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದೆ. 6.73 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು  ಪರೀಕ್ಷೆ  ಎದುರಿಸಿದ್ದಾರೆ. ಅದರಲ್ಲಿ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿಗೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ.

click me!