ಚಾಮುಂಡಿ ಆಣೆಗೂ ಸರ್ವನಾಶ ಆಗ್ತೀರಾ: ರಾಜ್ಯ ಬಿಜೆಪಿ ನಾಯಕರಿಗೆ ಹಿಡಿ ಶಾಪ

Published : Aug 27, 2019, 03:50 PM ISTUpdated : Aug 27, 2019, 04:08 PM IST
ಚಾಮುಂಡಿ ಆಣೆಗೂ ಸರ್ವನಾಶ ಆಗ್ತೀರಾ: ರಾಜ್ಯ ಬಿಜೆಪಿ ನಾಯಕರಿಗೆ ಹಿಡಿ ಶಾಪ

ಸಾರಾಂಶ

ರಾಜ್ಯದ  ನೂತನ ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಒಳಗೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಪಕ್ಷ ನಿಷ್ಠೆ ಹಾಗೂ ಹಿರಿತನಕ್ಕೆ ಖಾತೆ ನೀಡಿಲ್ಲವೆಂದು ಕೆಲ ಹಿರಿಯ ಸಚಿವರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ನಾಯಕರ ಈ ನಡವಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಬೆಂಗಳೂರು (ಆ.27): ರಾಜ್ಯ ಬಿಜೆಪಿ ರಾಜಕಾರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್ ಮಾಡುತ್ತಿದೆ.  ಡಿಸಿಎಂ ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ತೆಗೆದುಕೊಂಡ ಕೆಲ ನಿರ್ಧಾರಗಳು ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿಗೆ ಕಾರಣವಾಗಿದೆ.

ಒಂದೆಡೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಶಾಸಕರು ಅಸಮಾಧಾನಗೊಂಡಿದ್ದರೆ, ಮತ್ತೊಂದೆಡೆ ಖುದ್ದು ಸಚಿವರು ಸಹ ಖಾತೆ ಹಂಚಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಬಿಜೆಪಿ ನಾಯಕರ ವಿರುದ್ಧ ಕರಾವಳಿ ಹಿಂದೂ ‌ಕಾರ್ಯಕರ್ತರ ಕಿಡಿಕಾರಿದ್ದಾರೆ.

ಜಾರಕಿಹೊಳಿ, ಕತ್ತಿ ಕುಟುಂಬ ಹಣಿಯಲು BJP ಮಾಸ್ಟರ್ ಪ್ಲಾನ್

ಅಧಿಕಾರಕ್ಕಾಗಿ ರಾಜ್ಯ ಬಿಜೆಪಿ ನಾಯಕರ ಹೈಡ್ರಾಮವನ್ನು ಖಂಡಿಸಿರುವ ಹಿಂದೂಪರ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮನೆಮನೆಗೆ ಹೋಗಿ ಮತ ಕೇಳುವ ಕಾರ್ಯಕರ್ತರನ್ನ ಅನ್ಯಪಕ್ಷ, ದೇಶದ್ರೋಹಿಗಳ ಎದುರು ತಲೆ ತಗ್ಗಿಸುವಂತೆ ಮಾಡಬೇಡಿ ಅಂತೆಲ್ಲ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

17 ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ನಿಮ್ಮ ಅತಂತ್ರ ರಾಜಕೀಯದ ಬದಲು ಸಮ್ಮಿಶ್ರ ಸರ್ಕಾರವೇ ಇರುತ್ತಿತ್ತಲ್ಲವೇ? ಅಧಿಕಾರದ ಮದ ಏರಿದ ನಾಮರ್ದ ಸ್ವಾರ್ಥ ಬಿಜೆಪಿ ನಾಯಕರು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾರ್ಯಕರ್ತರನ್ನ ಅವಮಾನಿಸೋ ನೀವುಗಳು ತಾಯಿ ಚಾಮುಂಡಿಯ ಆಣೆ ಸರ್ವನಾಶ ಆಗುತ್ತೀರಾ ಎಂದು ಇಡೀ ಶಾಪ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!