ಶಿವನ ಭಕ್ತರಿಗೆ ಹಣ್ಣು, ಹಾಲು ಹಂಚಿ ಆರೈಕೆ ಮಾಡಿದ ಮುಸಲ್ಮಾನರು!

By Web DeskFirst Published Jul 22, 2019, 5:01 PM IST
Highlights

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಗಂಗಾ ತೀರದ ಶಿವ ಮಂದಿರ| ಶ್ರಾವಣ ಮಾಸದ ಮೊದಲ ಸೋಮವಾರ ದೇವಸ್ಥಾನಕ್ಕೆ ಬಂದ ಶಿವ ಭಕ್ತರಿಗೆ ಮುಸಲ್ಮಾನರಿಂದ ಆರೈಕೆ| ಹೃದಯಸ್ಪರ್ಶಿ ಸೇವೆಗೆ ಪ್ರಸನ್ನರಾದ ಶಿವನ ಭಕ್ತರು

ಕಾನ್ಪುರ[ಜು.22]: ಕೋಮುವಾದ, ಹಿಂಸಾಚಾರ ಹಾಗೂ ನಿರ್ದೋಷಿಗಳ ಮೇಲೆ ನಡೆಯುತ್ತಿರುವ ದಾಳಿ ಪ್ರಕರಣಗಳು ಹಿಂದೂ ಮುಸಲ್ಮಾನರ ನಡುವಿನ ಆತ್ಮೀಯತೆಗೆ ಧಕ್ಕೆಯುಂಟು ಮಾಡಿವೆ. ಹೀಗಿದ್ದರೂ ಆಗೊಮ್ಮೆ ಈಗೊಮ್ಮೆ ಎರಡೂ ಸಮುದಾಯದ ನಡುವಿನ ಮನಸ್ತಾಪಕ್ಕೆ ನಾಂದಿ ಹಾಡುವ ಘಟನೆಗಳೂ ಸದ್ದು ಮಾಡುತ್ತವೆ. ಉತ್ತರ ಪ್ರದೇಶ ಕಾನ್ಪುರದ ಜಾಜ್ಮವ್ ನ ಸಿದ್ಧನಾಥ ಘಾಟ್ ನಲ್ಲಿರುವ ಶಿವ ಮಂದಿರದ ಆವರಣವೂ ಇಂತಹುದೇ ಭಾವೈಕ್ಯತೆಗೆ ಸಾಕ್ಷಿಯಾಗಿದೆ. 

9 ಅಡಿ ಗೋಡೆಯಲ್ಲಿ ದೇಶದ ಸಾಮರಸ್ಯ: ಮಂದಿರ, ಮಸೀದಿಯ ಕತೆಯೇ ಸ್ವಾರಸ್ಯ!

ಶ್ರಾವಣ ಮಾಸದ ಮೊದಲ ಸೋಮವಾರ ಸಿದ್ಧನಾಥ ಘಾಟ್ ನಲ್ಲಿರುವ ಶಿವ ಮಂದಿರಕ್ಕೆ ಶಿವ ಭಕ್ತರು ದರ್ಶನಕ್ಕೆಂದು ಗುಂಪು ಗುಂಪಾಗಿ ಆಗಮಿಸುತ್ತಿದ್ದರು. ಹೀಗೆ ಬಹುದೂರ ನಡೆದು ಶಿವನ ದರ್ಶನ ಪಡೆದು ಹೊರಗಾಗಮಿಸುತ್ತಿದ್ದ ಭಕ್ತರ ಆಯಾಸ ನಿವಾರಿಸಲು ಕೆಲ ಮುಸಲ್ಮಾನರು ದೇವಸ್ಥಾನದ ಆವರಣದಲ್ಲಿ ನೀರು, ಹಣ್ಣು, ಜ್ಯೂಸ್, ಹಾಲು ವಿತರಿಸಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಇನ್ನು ಕಾನ್ಪುರದಲ್ಲಿ ಗಂಗಾನದಿ ತೀರದ ಸಿದ್ಧನಾಥ ಘಾಟ್ ನಲ್ಲಿರುವ ಶಿವ ಮಂದಿರ ನಗರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಎಂಬುವುದು ಗಮನಾರ್ಹ.

ಮುಸಲ್ಮಾನದ ಈ ಸೇವೆ ಕಂಡ ಭಕ್ತರು 'ಕೋಮುವಾದ ಹಿಂಸಾಚಾರ, ಧಾರ್ಮಿಕ ಬೇಧ ಭಾವ ನಡೆಯುವ ಈ ದಿನಗಳಲ್ಲಿ ಮುಸಲ್ಮಾನರ ಈ ನಡೆ ನಿಜಕ್ಕೂ ಶ್ಲಾಘನೀಯ. ಇದು ಎರಡೂ ಸಮುದಾಯದ ನಡುವಿನ ಬಾಂಧವ್ಯ ಹೆಚ್ಚು ಮಾಡುತ್ತದೆ. ಮಂದಿರಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಅನೇಕರು ವ್ರತ ಮಾಡಿರುತ್ತಾರೆ. ಹೀಗಿರುವಾ ಇಂತಹ ಸೇವೆ ಶಾಂತಿಯುತ ಸಮಾಜದ ನಿರ್ಮಾಣಕ್ಕೆ ಸಹಕಾರಿ' ಎಂದಿದ್ದಾರೆ.

ರಕ್ತದ ಬಣ್ಣ ಒಂದೇ: ಹಿಂದೂ ಗೆಳೆಯನಿಗಾಗಿ ರಕ್ತ ನೀಡಲು ಉಪವಾಸ ಕೈಬಿಟ್ಟ ಅಹ್ಮದ್!

ಈ ಕುರಿತಾಗಿ ಪ್ರತಿಕ್ರಿಯಿಸಿದ ಮತ್ತೊಬ್ಬ ಭಕ್ತ 'ಇದೊಂದು ಹಿಂದೂಗಳ ಹಬ್ಬ. ಹೀಗಿದ್ದರೂ ಸಾಮರಸ್ಯ ಮೆರೆದ ಈ ಮುಸ್ಲಿಂ ಸಹೋದರರ ನಡೆ ಹೃದಯ ಸ್ಪರ್ಶಿಸಿದೆ' ಎಂದಿದ್ದಾರೆ.

click me!