
ನ್ಯೂಯಾರ್ಕ್[ಜು.22]: ನ್ಯೂಯಾರ್ಕ್‌ನ ಗ್ಲೆನ್ ಓಕ್ಸ್ ಬಳಿಯಿರುವ ಶಿವ ಶಕ್ತಿ ಪೀಠದ ಬಳಿ ಹಿಂದೂ ಅರ್ಚಕ ಸ್ವಾಮಿ ಹರೀಶ್ ಚಂದೇರ್ ಪುರಿ 52 ವರ್ಷದ ಅಮೆರಿಕಾದ ಪ್ರಜೆಯೊಬ್ಬರು ದಾಳಿ ನಡೆಸಿದ್ದಾರೆ.
ವಾರದ ಹಿಂದೆ ಜುಲೈ 1 ರಂದು ನಡೆದ ಈ ಘಟನೆಯಲ್ಲಿ ಈ ಘಟನೆ ನಡೆದಿದ್ದು, ಅರ್ಚಕರಿಗೆ ಪರಚಿದ ಗಾಯಗಳಾಗಿವೆ. ಸದ್ಯ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜನಾಂಗೀಯ ದ್ವೇಷದಿಂದ ಈ ದಾಳಿ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆರೋಪಿ ಸೆರ್ಗಿಯೊ ಗೌವಿಯಾರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ನಡೆಸುವ ವೇಳೆ ಆರೋಪಿ 'ಇದು ನನ್ನ ನೆರೆಹೊರೆ' ಎಂದು ಜೋರಾಗಿ ಕಿರುಚುತ್ತಿದ್ದ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ದಾಳಿಗೆ ಹಿಂದೆ ಟ್ರಂಪ್ ಟ್ವೀಟ್ ಕಾರಣವೇ?:
ಕೆಲ ದಿನಗಳ ಹಿಂದಷ್ಟೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಒಂದನ್ನು ಮಾಡುತ್ತಾ 'ನಮ್ಮ ದೇಶದ ಮುಕ್ತ, ಸ್ವಚ್ಛ ಹಾಗೂ ಯಶಸ್ವಿಯಾಗಿದೆ. ಒಂದು ವೇಳೆ ನಮ್ಮ ರಾಷ್ಟ್ರವನ್ನು ಕಂಡು ನಿಮಗೆ ಆಗದಿದ್ದರೆ, ಅಸಂತುಷ್ಟರಾಗಿದ್ದರೆ ಈ ಕೂಡಲೇ ನಿಮ್ಮ ಮೂಲಸ್ಥಾನಕ್ಕೆ ಹಿಂದಿರುಗಿ' ಎಂದು ಡೆಮಾಕ್ರೆಟಿಕ್ ಸಂಸದರಾದ ಸೊಮಾಲಿ ಮೂಲದ ಇಲ್ಹನ್ ಒಮರ್ ಸೇರಿದಂತೆ ನಾಲ್ವರು ವಿದೇಶಿ ಮೂಲದ ಸಂಸದರಿಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅರ್ಚಕರ ಮೇಲೆ ಈ ದಾಳಿ ನಡೆದಿದ್ದು ಹಲವಾರು ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಜನಾಂಗೀಯ ದ್ವೇಷದ ಕಿಚ್ಚು ಹೊತ್ತಿರುವ ಆತಂಕ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.