
ಬೆಂಗಳೂರು(ಡಿ. 04): ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಮೊದಲ ಬಾರಿಗೆ 2016-17ನೇ ಸಾಲಿನ ಕನ್ನಡಪ್ರಭ ಕಿರಿಯ ಸಂಪಾದಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 7ರಿಂದ 14 ವರ್ಷದೊಳಗಿನ ಮಕ್ಕಳೇ ಪತ್ರಿಕೆ ರಚಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದೇ ಈ ಸ್ಪರ್ಧೆಯ ಮುಖ್ಯ ಉದ್ದೇಶ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಹೇಗೆ..?
ಆಸಕ್ತಿವುಳ್ಳ ವಿದ್ಯಾರ್ಥಿಗಳು ಅಥವಾ ಶಾಲೆಗಳು ಸುವರ್ಣನ್ಯೂಸ್/ಕನ್ನಡಪ್ರಭ ಕೇಂದ್ರ ಕಚೇರಿಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ. ಸಂಪರ್ಕಿಸಬೇಕಾದ ನಂಬರ್ 080-40984100, 8050069447. ಇಮೇಲ್: kiriyasampadaka@kannadaprabha.in . ಈಗಾಗಲೇ ರಾಜ್ಯಾದ್ಯಂತ 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸ್ಪರ್ಧೆಯಲ್ಲಿ ಭಾಗಿಯಾದ ಮಕ್ಕಳಿಗೆ ಕನ್ನಡಪ್ರಭ ಮುಖಪುಟವಿರುವ ಖಾಲಿ ಪತ್ರಿಕೆ'ಗಳನ್ನುನೀಡಲಾಗುತ್ತದೆ. ಅದರ ಜೊತೆಗೆ ಪ್ರಚಲಿತ ಘಟನೆ, ಕ್ರೀಡೆ, ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನೀಡಲಾಗುತ್ತದೆ. ಮಕ್ಕಳು ಆ ಪ್ರಶ್ನೆಗಳಿಗೆ 20 ದಿನಗಳೊಳಗೆ ಉತ್ತರಿಸಬೇಕು.
ಸ್ಪರ್ಧೆಯಲ್ಲಿ ರಾಜ್ಯದ ಯಾವುದೇ ಶಾಲೆಯ ಮಕ್ಕಳು ಭಾಗಿಯಾಗಬಹುದು. ಮೊದಲ ಸುತ್ತಿನಲ್ಲಿ 60 ಮಕ್ಕಳನ್ನು ಆಯ್ಕೆ ಮಾಡಿ ಅದರಲ್ಲಿ ವಿಜೇತ ಮೂವರಿಗೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಗುವುದು. ಮಕ್ಕಳ ಪ್ರತಿಭೆ ಗುರುತಿಸಲು ಈ ಅಪೂರ್ವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ. ಆಸಕ್ತರು ಬೇಗನೆ ಹೆಸರು ನೋಂದಯಿಸಿಕೊಳ್ಳಿ.
- ಮುತ್ತಪ್ಪ ಲಮಾಣಿ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.