
ಬೆಂಗಳೂರು(ಡಿ. 04): ಸಬ್'ಇನ್ಸ್'ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇಳಲು ಹೋಗಿ ಎಡಿಜಿಪಿ ರಾಘವೇಂದ್ರ ಔರದ್ಕರ್'ರಿಂದ, ಗೃಹಸಚಿವರ ಪಿಎ ಮಂಗಳಾರತಿ ಮಾಡಿಸಿಕೊಂಡ ಘಟನೆ ಸಿಐಡಿ ಕೇಂದ್ರ ಕಚೇರಿಯಲ್ಲಿ ನಿನ್ನೆ ನಡೆದಿರುವುದು ಬೆಳಕಿಗೆ ಬಂದಿದೆ. ಗೃಹಸಚಿವರ ಆಪ್ತಸಹಾಯಕನ ಹೆಸರು ಕೇಶವ್ ಎಂದು ತಿಳಿದುಬಂದಿದೆ.
ನಿನ್ನೆ ಮಧ್ಯಾಹ್ನ 3.30 ರ ಸಮಯದಲ್ಲಿ ಎಡಿಜಿಪಿ ರಾಘವೇಂದ್ರ ಔರದ್ಕರ್ ಬಳಿ ತೆರಳಿದ್ದ ಕೇಶವ್, ತನ್ನ ಮಗ ಸಬ್'ಇನ್ಸ್'ಪೆಕ್ಟರ್ ಆಗಲು ಅವಕಾಶವಿದೆಯಾ ಎಂದು ಪರೋಕ್ಷವಾಗಿ ಪ್ರಶ್ನೆಪತ್ರಿಕೆ ಪಡೆಯಲು ಎಡಿಜಿಪಿಯಿಂದ ಬಯಸಿದ್ದಾನೆ. ಕೇಶವ್'ನ ಈ ಉದ್ದೇಶವನ್ನು ತಿಳಿದ ಎಡಿಜಿಪಿ ರಾಘವೇಂದ್ರ ಔರಾದ್ಕರ್ ಅವರು ಕೇಶವ್'ನನ್ನು 23 ನಿಮೀಷಗಳ ಕಾಲ ತೀವ್ರ ತರಾಟೆಗೆ ತಗೆದುಕೊಂಡು ಆತನಿಂದ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡು ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.