ಸದನದಲ್ಲಿ ಕನ್ನಡ ಪ್ರಭ ಮುಖಪುಟ ಪ್ರದರ್ಶಿಸಿ ಬಿಜೆಪಿ ಪ್ರತಿಭಟನೆ

Published : Mar 17, 2017, 02:59 AM ISTUpdated : Apr 11, 2018, 12:49 PM IST
ಸದನದಲ್ಲಿ ಕನ್ನಡ ಪ್ರಭ ಮುಖಪುಟ ಪ್ರದರ್ಶಿಸಿ ಬಿಜೆಪಿ ಪ್ರತಿಭಟನೆ

ಸಾರಾಂಶ

ಗೋವಿಂದ,ಗೋವಿಂದ,ಗೋವಿಂದ  ಎಂದು ಘೋಷಣೆ ಹಾಕಿದರು. ಇದರಿಂದಾಗಿ ಸ್ಪೀಕರ್ ಭೋಜನ ವಿರಾಮಕ್ಕೆ ಮುಂದೂಡಿದರು. ಭೋಜನ ವಿರಾಮದ ನಂತರ ಸದನ ಸೇರಿದಾಗಲೂ ಅದೇ ಧರಣಿ ಮುಂದುವರಿಯಿತು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಾರಾ ಪ್ರಕರಣವನ್ನೇ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಗದ್ದಲ  ಮುಂದುವರೆದಿದ್ದರಿಂದ ಸ್ಪೀಕರ್ ಅವರು ಶುಕ್ರವಾರಕ್ಕೆ ಕಲಾಪ ಮುಂದೂಡಿದರು.

ಬೆಂಗಳೂರು(ಮಾ.17): ಹೈಕಮಾಂಡ್'ಗೆ ರಾಜ್ಯ ಸರ್ಕಾರದಿಂದ ಕಪ್ಪ ಸಂದಾಯವಾದ ಕುರಿತ ವಿವರವಿದೆ ಎನ್ನಲಾದ ಡೈರಿ ಬಗ್ಗೆ ಗುರುವಾರ ಕೋಲಾಹಲ ನಡೆದು ವಿಧಾನಮಂಡಲದ  ಉಭಯ ಸದನದ ಕಲಾಪ ಬಲಿಯಾಯಿತು.

ಈ ಸಂದರ್ಭದಲ್ಲಿ  ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ನಾಯಕತ್ವದಲ್ಲಿ  ಬಿಜೆಪಿ ನಾಯಕರು ಕನ್ನಡಪ್ರಭ ವರದಿಯನ್ನೇ ಭಿತ್ತಿಪತ್ರದ ರೂಪದಲ್ಲಿ  ಪ್ರದರ್ಶಿಸಿದರು. ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಯ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.

ಗೋವಿಂದ,ಗೋವಿಂದ,ಗೋವಿಂದ  ಎಂದು ಘೋಷಣೆ ಹಾಕಿದರು. ಇದರಿಂದಾಗಿ ಸ್ಪೀಕರ್ ಭೋಜನ ವಿರಾಮಕ್ಕೆ ಮುಂದೂಡಿದರು. ಭೋಜನ ವಿರಾಮದ ನಂತರ ಸದನ ಸೇರಿದಾಗಲೂ ಅದೇ ಧರಣಿ ಮುಂದುವರಿಯಿತು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಾರಾ ಪ್ರಕರಣವನ್ನೇ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಗದ್ದಲ  ಮುಂದುವರೆದಿದ್ದರಿಂದ ಸ್ಪೀಕರ್ ಅವರು ಶುಕ್ರವಾರಕ್ಕೆ ಕಲಾಪ ಮುಂದೂಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, ನಿಯಮ 60 ಅಡಿ ನಿಲುವಳಿ ಸೂಚನೆ‌ ಮಂಡಿಸಿದ್ದೆವು. ಗೋವಿಂದ ರಾಜ್ ಮನೆಯಲ್ಲಿ ಡೈರಿ ಸಿಕ್ಕ ವಿಚಾರ ದೇಶದಾದ್ಯಂತ ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ ಸದನದಲ್ಲಿ ಸ್ಪೀಕರ್ ಪ್ರಶ್ನೋತ್ತರ ಅವಧಿ ಮುಗಿದ ಮೇಲೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರೂ ಸ್ಪೀಕರ್ ಮನವಿಯನ್ನು ತಿರಸ್ಕರಿಸಿದರು. ಸ್ಪೀಕರ್ ಅವಕಾಶ ನೀಡದ್ದನ್ನೆ ಪ್ರಶ್ನಿಸಿ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

70ರ ಹರೆಯದಲ್ಲಿ ಸಿಕ್ಕಿಂ ಸುಂದರಿಗೆ ಮನಸೋತ ಆನಂದ್ ಮಹೀಂದ್ರ,ಅವಳಂದಕ್ಕೆ ಕಳೆದುಹೋಗ್ತೀರಿ
ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌