ಹುತಾತ್ಮ ಯೋಧರ ಕುಟುಂಬಕ್ಕೆ ಅಕ್ಷಯ್ 1.08 ಕೋಟಿ ಹಣಕಾಸು ನೆರವು

By Suvarna Web DeskFirst Published Mar 17, 2017, 1:37 AM IST
Highlights

ಹುತಾತ್ಮ ಯೋಧರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸುವಂತೆ ಗೃಹ ಸಚಿವಾಲಯಕ್ಕೆ ನಿನ್ನೆ ಮಧ್ಯಾಹ್ನ ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದರು. ಮನವಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿದ ಬೆನ್ನಲ್ಲೇ ಅಕ್ಷಯ್ ಯೋಧರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ.

ನವದೆಹಲಿ (ಮಾ.17): ಛತ್ತೀಸ್’ಗಡದ ಸುಕ್ಮಾದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ  ಬಾಲಿವುಡ್ ನಟ ಅಕ್ಷಯ್ ಕುಮಾರ್ ರೂ.1.08 ಕೋಟಿ ಹಣಕಾಸು ನೆರವನ್ನೊದಗಿಸಿ ತಾನು ನೈಜ ಜೀವನದಲ್ಲೂ ಹೀರೋ ಎಂದು ತೋರಿಸಿಕೊಟ್ಟಿದ್ದಾರೆ.

ಮಾ.11 ರಂದು ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 12 ಮಂದಿ ಸಿಆರ್’ಪಿಎಫ್’ ಯೋಧರು ಹುತಾತ್ಮರಾಗಿದ್ದರು. ಅಕ್ಷಯ್ ಕುಮಾರ್ ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ ರೂ.9 ಲಕ್ಷಗಳನ್ನು ನೀಡಿದ್ದಾರೆ.

Latest Videos

ಹುತಾ ಯೋಧರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸುವಂತೆ ಗೃಹ ಸಚಿವಾಲಯಕ್ಕೆ ನಿನ್ನೆ ಮಧ್ಯಾಹ್ನ ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದರು. ಮನವಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿದ ಬೆನ್ನಲ್ಲೇ ಅಕ್ಷಯ್ ಯೋಧರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ.

ಅಕ್ಷಯ್ ಕುಮಾರ್ ಅವರ  ಕ್ರಮವು ದೇಶಪ್ರೇಮ ಹಾಗೂ ಸಿಆರ್’ಪಿಎಫ್’ನೊಂದಿಗಿರುವ ಗೌರವವನ್ನು ತೋರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

I thank Shri @akshaykumar on donating a generous amount for the welfare of the families of CRPF martyrs who lost their lives in Sukma https://t.co/sVrp6RGiFd

— Rajnath Singh (@rajnathsingh) March 16, 2017

The generosity of Shri @akshaykumar is highly commendable. This gesture will inspire others to come forward & help the families of martyrs

— Rajnath Singh (@rajnathsingh) March 16, 2017

ಅಕ್ಷಯ್ ಕುಮಾರ್ ಉದಾರತೆಯನ್ನು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ ಅವರು ಕೂಡಾ ಶ್ಲಾಘಿಸಿದ್ದಾರೆ.

 

click me!