ಪ್ರೀತಿಸಿದ ಹುಡುಗನ ವರಿಸಿದ ಚಿಂಗಾರಿ ಬೆಡಗಿ ದೀಪಿಕಾ ಕಾಮಯ್ಯ

By Suvarna Web DeskFirst Published Dec 4, 2016, 10:15 AM IST
Highlights

ತೆಲುಗು ಸಂಪ್ರದಾಯ ಶೈಲಿಯಲ್ಲಿ ದೀಪಿಕಾ ಹಸೆಮಣೆ ಏರಿದ್ದಾರೆ. ಸಪ್ತಪದಿ ಶಾಸ್ತ್ರದ ನಂತ್ರ ನವ ವಧು ವರರ ಆರತಕ್ಷತೆ ಕೂಡ ನಡೆಯಿತು.

ಬೆಂಗಳೂರು(ಡಿ. 04): ಚಿಂಗಾರಿ ಬೆಡಗಿ ದೀಪಿಕಾ ಕಾಮಯ್ಯ ಪ್ರೀತಿಸಿದ ಹುಡುಗ ಸುಮಂತ್ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ. ಹೊಸೂರು ರಸ್ತೆಯ ಮಣಿಪಾಲ್ ಕೌಂಟಿ ರೆಸಾಟ್'​ನಲ್ಲಿ ಬೆಳಗ್ಗೆ 9 ಗಂಟೆಯ ಮುಹೂರ್ತದಲ್ಲಿ ಮಾಂಗಲ್ಯಧಾರಣೆಯಾಯಿತು. ಬಂಧುಮಿತ್ರರ ಸಮ್ಮುಖದಲ್ಲಿ ದೀಪಿಕಾ ಪ್ರೀತಿಸಿದ ಹುಡುಗನನ್ನು ವರಿಸಿದ್ದಾರೆ. ಮಿರಮಿರ ಮಿಂಚುವ ಸೀರೆಯಲ್ಲಿ ದೀಪಿಕಾ ಕಣ್ಸೆಳೆದ್ರೆ, ಕುಡ್ತಾ ಡ್ರೆಸ್​ನಲ್ಲಿ ಸುಮಂತ್ ಗಮನ ಸೆಳೆದ್ರು.

ತೆಲುಗು ಸಂಪ್ರದಾಯ ಶೈಲಿಯಲ್ಲಿ ದೀಪಿಕಾ ಹಸೆಮಣೆ ಏರಿದ್ದಾರೆ. ಸಪ್ತಪದಿ ಶಾಸ್ತ್ರದ ನಂತ್ರ ನವ ವಧು ವರರ ಆರತಕ್ಷತೆ ಕೂಡ ನಡೆಯಿತು.

click me!