
ಆನೇಕಲ್(ಡಿ. 04): ಮೊಬೈಲ್'ನಲ್ಲಿ ಸೂಕ್ಷ್ಮವಾದ ಡೇಟಾ ಇರಿಸಬಾರದು ಎಂದು ನಾವು ಕೇಳುತ್ತಲೇ ಇರುತ್ತೇವೆ. ಇಲ್ಲಿ, ಅಂಥದ್ದೊಂದು ಬುದ್ಧಿಮಾತಿಗೆ ಪುಷ್ಟಿನೀಡುವ ಘಟನೆಯೊಂದು ನಡೆದಿದೆ. ವಿದ್ಯಾರ್ಥಿಯೊಬ್ಬನ ಮೊಬೈಲ್ ಕದ್ದ ದುಷ್ಕರ್ಮಿಗಳು ಆ ಮೊಬೈಲ್'ನಲ್ಲಿದ್ದ ಅಶ್ಲೀಲ ಫೋಟೋಗಳನ್ನಿಟ್ಟುಕೊಂಡು ಬ್ಲ್ಯಾಕ್'ಮೇಲ್ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಕಿರಣ್, ಅಕ್ಷಯ್ ಮತ್ತು ಅಶ್ವಿನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ..
ಘಟನೆ ಏನು?
ಎರಡು ತಿಂಗಳ ಹಿಂದೆ, ಅ. 14ರಂದು ಹೊಸೂರ ರಸ್ತೆಯ ಸಿಂಗಸಂದ್ರದ ಬಳಿ ವಿದ್ಯಾರ್ಥಿ ತನ್ನ ಮೊಬೈಲನ್ನು ಕಳೆದುಕೊಂಡಿರುತ್ತಾನೆ. ಆ ಮೊಬೈಲ್'ನಲ್ಲಿ ವಿದ್ಯಾರ್ಥಿಯು ಫ್ಯಾಷನ್ ಡಿಸೈನರ್ ತನ್ನ ಗರ್ಲ್'ಫ್ರೆಂಡ್ ಜೊತೆ ಅಶ್ಲೀಲ ಭಂಗಿಯಲ್ಲಿರುವ ದೃಶ್ಯಗಳಿರುತ್ತವೆ. ಮೊಬೈಲ್ ಕದ್ದ ಖದೀಮರು ಮೆಮೋರಿ ಕಾರ್ಡ್ ಇಟ್ಟುಕೊಂಡು ಮೊಬೈಲನ್ನು ಮಾರಿಬಿಡುತ್ತಾರೆ. ನಂತರ, ಆ ಮೆಮೋರಿ ಕಾರ್ಡ್'ನಲ್ಲಿದ್ದ ಫೋಟೋ ಮತ್ತು ವಿಡಿಯೋಗಳ ಮೂಲಕ ಯುವಕ ಹಾಗೂ ಆತನ ಗರ್ಲ್'ಫ್ರೆಂಡ್'ರನ್ನು ಬ್ಲ್ಯಾಕ್'ಮೇಲ್ ಮಾಡತೊಡಗುತ್ತಾರೆ. ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಾರೆ. ಹಣಕೊಡದಿದ್ದರೆ ಫೇಸ್ಬುಕ್'ನಲ್ಲಿ ಫೋಟೋ ಹಾಕುವುದಾಗಿ ಬೆದರಿಕೆ ಹಾಕುತ್ತಾರೆ.
ಆದರೆ, ವಿದ್ಯಾರ್ಥಿಯು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಇದಾದ ನಂತರ ಪೊಲೀಸರು ಬೀಸಿದ ಬಲೆಗೆ ಕಳ್ಳರು ಸಿಕ್ಕಿಬೀಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.