ಆತಂಕದಲ್ಲಿರುವುದು ಹಿಂದೂಗಳಲ್ಲ, ಸಂವಿಧಾನ: ಕನ್ಹಯ್ಯಾ ಕುಮಾರ್!

Published : Dec 24, 2018, 02:08 PM IST
ಆತಂಕದಲ್ಲಿರುವುದು ಹಿಂದೂಗಳಲ್ಲ, ಸಂವಿಧಾನ: ಕನ್ಹಯ್ಯಾ ಕುಮಾರ್!

ಸಾರಾಂಶ

ದೇಶದ ಹಿಂದೂಗಳು ಆತಂಕದಲ್ಲಿಲ್ಲ ಎಂದ ಕನ್ಹಯ್ಯಾ| ಆತಂಕದಲ್ಲಿರುವುದು ದೇಶದ ಸಂವಿಧಾನ ಎಂದ ಕನ್ಹಯ್ಯಾ| ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದ ಯುವ ಹೋರಾಟಗಾರ| 'ಮೋದಿಗೆ ಲೋಕಸಭೆ ಕಲಾಪ ನಡೆಯುವುದು ಬೇಕಿಲ್ಲ'| ಬಿಜೆಪಿಯವರು ದಂಗೆಬಾಜ್ ಎಂದು ಹರಿಹಾಯ್ದ ಕನ್ಹಯ್ಯಾ ಕುಮಾರ್

ನಾಗ್ಪುರ್(ಡಿ.24): ದೇಶದಲ್ಲಿ ಆತಂಕದಲ್ಲಿರವುದು ಹಿಂದೂಗಳಲ್ಲ, ಬದಲಿಗೆ ಸಂವಿಧಾನ ಆತಂಕದಲ್ಲಿದೆ ಎಂದು ಯುವ ಹೋರಾಟಗಾರ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.

ಇಲ್ಲಿನ ಮಂಕಾಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ಬಹುಜನ್ ವಿಚಾರ್ ಮಂಚ್ ಆಯೋಜಿಸಿದ್ದ 'ಸಂವಿಧಾನ್ ಜಾಗರ್' ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಹಯ್ಯಾ, ಹಿಂದೂ ಧರ್ಮವಾಗಲಿ, ಹಿಂದೂಗಳಾಗಲಿ ಆತಂಕದಲ್ಲಿಲ್ಲ, ಬದಲಿಗೆ ಧರ್ಮದ ಹೆಸರು ಹೇಳಿಕೊಂಡು ಸಂವಿಧಾನದ ಮೇಲೆ ಆಕ್ರಮಣ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.

ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಆದರೂ ಪ್ರಧಾನಿ ಮೋದಿ ಪ್ರತಿಪಕ್ಷಗಳು ಕಲಾಪ ನಡೆಯಲು ಬಿಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅಸಲಿಗೆ ಕಲಾಪ ನಡೆಯುವುದು ಖುದ್ದು ಪ್ರಧಾನಿ ಅವರಿಗೇ ಬೇಕಿಲ್ಲ ಎಂದು ಕನ್ಹಯ್ಯಾ ಆರೋಪಿಸಿದರು.

ಬಿಜೆಪಿಯವರನ್ನು ದಂಗೆ ಪ್ರಚೋದಿಸುವವರು ಎಂದು ಆರೋಪಿಸಿದ ಕನ್ಹಯ್ಯಾ, ೨೦೦೨ರ ಗುಜರಾತ್ ದಂಗೆ ಸಮಯದಲ್ಲಿ ಅಲ್ಪಸಂಖ್ಯಾತರ ಆಶ್ರಯ ಶಿಬಿರಕ್ಕೆ ಭೇಟಿ ನೀಡುವಂತೆ ಮೋದಿ ಅವರನ್ನು ಕೇಳಿದಾಗ ಮಕ್ಕಳನ್ನು ಹೆರುವ ಕ್ಯಾಂಪ್‌ಗೆ ಹೊಗಿ ನಾನೇನು ಮಾಡಲಿ ಎಂದು ಹೇಳಿದ್ದನ್ನು ಉಲ್ಲೇಖಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್