ಕಾಂಗ್ರೆಸ್ ಜೊತೆ ಮೈತ್ರಿಗೆ ಕಮಲ್ ಹಾಸನ್ ಓಕೆ: ಷರತ್ತುಗಳು ಅನ್ವಯ

By Web DeskFirst Published Oct 14, 2018, 1:55 PM IST
Highlights

ಮಕ್ಕಳ್ ನಿಧಿ ಮೈಮ್ ಪಕ್ಷದ ಅಧ್ಯಕ್ಷ  ಕಮಲ್ ಹಾಸನ್ ಕಾಂಗ್ರೆಸ್ ಜೊತೆ ಮೈತ್ರಿಗೆ ಕಮಲ್ ಓಕೆ ಅಂದಿದ್ದಾರೆ. ಆದ್ರೆ ಷರತ್ತುಗಳನ್ನು ಹಾಕಿದ್ದಾರೆ. ಏನದು ಷರತ್ತು ಇಲ್ಲಿದೆ ವಿವರ.

ಚೆನ್ನೈ, (ಅ.14):  ಮುಂಬರುವ ಲೋಕಸಭಾ ಚುನಾವಣೆಗೆ ಸ್ಟಾರ್ ನಟ ಮಕ್ಕಳ್ ನಿಧಿ ಮೈಮ್ ಪಕ್ಷದ ಅಧ್ಯಕ್ಷ  ಕಮಲ್ ಹಾಸನ್ ಅವರು ಕಾಂಗ್ರೆಸ್ ಜತೆ ಕೈ ಜೋಡಿಸಲು ಸಿದ್ಧರಾಗಿದ್ದಾರೆ. 

ಮೈತ್ರಿ ಬಗ್ಗೆ ಸುದ್ದಿಗಾರರೊಮದಿಗೆ ಮಾತನಾಡಿದ ಕಮಲ್ ಹಾಸನ್, ತಮ್ಮ ಪಕ್ಷವಾದ ಮಕ್ಕಳ್ ನೀದಿ ಮೈಯಂ(ಎಂಎನ್ಎಂ), ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ಧವಿದೆ ಆದರೆ, ಡಿಎಂಕೆ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ಬಿಡಬೇಕು ಎಂದು ಷರತ್ತು ವಿಧಿಸಿದ್ದಾರೆ. 

ಕಮಲ್ ಹಾಸನ್ ಅವರು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, 2019ರ ಲೋಕಸಭಾ ಚುನಾವಣೆಗೆ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದರು. 

ಮಾತುಕತೆಯಂತೆ ಮೈತ್ರಿಗೆ ಕಮಲ್ ಓಕೆ ಅಂದಿದ್ದಾರೆ. ಆದ್ರೆ ಕಂಡಿಷನ್ ಹಾಕಿರುವುದು ಮಾತ್ರ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ. ಒಂದು ಕಡೆ ಕಮಲ ಹಸನ್ ಜೊತೆ ಕೈ ಜೋಡಿಸಿದ್ರೆ ಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಳ್ಳಬೇಕಿದೆ. 

ಇಲ್ಲವಾದಲ್ಲಿ ಕಮಲ್ ಹಾಸನ್ ಎಂಎನ್ಎಂ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸುವುದು ಅನುಮಾನವಾಗಿದೆ. ಇದ್ರಿಂದ ಕಾಂಗ್ರೆಸ್ ಗೆ ಏನು ಮಾಡಬೇಕು ಎನ್ನುವುದು ತಿಳಿಯದೇ  ಗೊಂದಲದಲ್ಲಿದೆ.

click me!