
ಚೆನ್ನೈ(ಜೂ.2): ಜಿಎಸ್'ಟಿ ತೆರಿಗೆ ಪ್ರಾದೇಶಿಕ ಸಿನಿಮಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದ್ದು, ಕೇಂದ್ರ ಸರ್ಕಾರ ತೆರಿಗೆಯನ್ನು ಶೇ. 12 ಅಥವಾ 15ಕ್ಕೆ ಇಳಿಸದಿದ್ದರೆ ಸಿನಿಮಾ ರಂಗವನ್ನು ತ್ಯಜಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರದೇಶಿಕ ಭಾಷೆ ಸಿನಿಮಾಗಳ ಮೇಲೆ ಶೇ. 28 ರಷ್ಟು ತೆರಿಗೆಯನ್ನು ಕಡ್ಡಾಯಗೊಳಿಸಿದ್ದೆ ಆದರೆ ಸಿನಿಮಾ ರಂಗವನ್ನು ಬಿಟ್ಟು ಬಿಡುತ್ತೇನೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಲ್ಲಿ ಮನವಿ ಮಾಡಿಕೊಂಡ ಅವರು ಏಕರೂಪ ತೆರಿಗೆಯನ್ನು 12 ಅಥವಾ 15ಕ್ಕೆ ಇಳಿಸಿ ಎಂದು ತಿಳಿಸಿದ್ದಾರೆ.
| ಪ್ರಧಾನಿ ಮೋದಿ ಅವರು ಕಳೆದ ವರ್ಷ ನೋಟು ರದ್ದುಗೊಳಿಸಿದ್ದರಿಂದ ಕಪ್ಪು ಹಣ ನಿಯತ್ರಣಗೊಂಡಿತ್ತು ಆದರೆ ಜಿಎಸ್'ಟಿ'ಯಿಂದ ನಮ್ಮ ಉದ್ಯಮಕ್ಕೆ ಪೆಟ್ಟು ಬೀಳಲಿದೆ ಎಂದಿದ್ದಾರೆ. ಜಿಎಸ್'ಟಿ ತೆರಿಗೆ ಜುಲೈ 1ರಿಂದ ದೇಶದ್ಯಂತ ಜಾರಿಗೊಳ್ಳಲಿದ್ದು, ಪ್ರಸ್ತುತ ಕನ್ನಡ, ಮರಾಠಿ, ಬಂಗಾಲಿ ಸಿನಿಮಾ ಸೇರಿದಂತೆ ಪ್ರಾದೇಶಿಕ ಸಿನಿಮಾಗಳಿಗೆ ಶೇ. 10 ರಿಂದ 15ರವರೆಗೆ ತೆರಿಗೆ ವಿಧಿಸಲಾಗುತ್ತಿದೆ. ಏಕ ರೂಪ ತೆರಿಗೆ ನೀತಿ ಜಾರಿಗೊಳಿಸಿದರೆ ಶೇ.28 ರಷ್ಟು ತೆರಿಗೆ ಅನ್ವಯಗೊಳ್ಳುತ್ತದೆ. ಆಂಧ್ರ ಪ್ರದೇಶ ಹಣಕಾಸು ಸಚಿವ ಯನಮಾಲ ರಾಮಕೃಷ್ಣುಡು ಇತ್ತೀಚಿಗಷ್ಟೆ ಅರುಣ್ ಜೇಟ್ಲಿ ಅವರಿಗೆ ತೆರಿಗೆ ಕಡಿಮೆಗೊಳಿಸಲು ಪತ್ರ ಬರೆದಿದ್ದರು. ಅಲ್ಲದೆ ಪ್ರದೇಶಿಕ ಭಾಷೆಯ ಹಲವು ರಾಜಕಾರಣಿಗಳು ಹಾಗೂ ಸಿನಿಮಾ ದಿಗ್ಗಜರು ಪ್ರದೇಶಿಕ ಭಾಷೆಗಳಿಗೆ ಶೇ.28 ರಷ್ಟು ತೆರಿಗೆಯನ್ನು ವಿರೋಧಿಸಿದ್ದಾರೆ. --
|
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.