18 ಗರ್ಭ'ಪಾತದ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ

By Suvarna Web DeskFirst Published Jun 2, 2017, 6:03 PM IST
Highlights

ಆದರೆಇಲ್ಲೊಬ್ಬಮಹಿಳೆ 18 ಗರ್ಭಾಪಾತದನಂತರಮಗುವಿಗೆಜನ್ಮನೀಡಿದ್ದಾರೆ. ಆಶ್ಚರ್ಯವಾದರೂಸುದ್ದಿನಿಜ. 38 ವರ್ಷದಮಹಿಳೆ 20 ವರ್ಷದಲ್ಲಿ18 ಬಾರಿಗರ್ಭಪಾತವಾಗಿಈಗಷ್ಟೆಗಂಡುಮಗುವಿಗೆಜನ್ಮನೀಡಿದ್ದಾರೆ.

ಆಗ್ರ(ಜೂ.02): ಗರ್ಭಾವಸ್ಥೆ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾಗಿಯೋ ಹಾಗೂ ಮತ್ತಲವು ಕಾರಣಗಳಿಂದ ಕೆಲವು ಸಂದರ್ಭಗಳಲ್ಲಿ ಮಹಿಳೆಯರಿಗೆ ಗರ್ಭಾಪಾತವಾಗುವುದು ಸಾಮಾನ್ಯ.

ಕೆಲವೊಂದು ಮಹಿಳೆಯರಿಗೆ ಹಲವು ಬಾರಿ ಗರ್ಭಾಪಾತವಾದರೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಿರುತ್ತದೆ. ತಮ್ಮ ಪ್ರಾಣಕ್ಕೂ ಸಂಚಾಕಾರವಾಗುವ ಸಾಧ್ಯತೆಯಿರುತ್ತದೆ. ಹಲವು ಬಾರಿ ಗರ್ಭಪಾತವಾದರೆ ದಂಪತಿಗಳು ಸ್ವಂತ ಮಕ್ಕಳ ಯೋಚನೆ ಬಿಟ್ಟು ಅನಾಥಾಶ್ರಮದಲ್ಲಿ ಅಥವಾ ದತ್ತು ಸಂಬಂಧಿಕರಿಂದಲೋ ಇಲ್ಲವೇ ಬೇರೆ ರೀತಿಯಲ್ಲಿ ಮಕ್ಕಳು ಪಡೆಯುವುದು ಸಹಜ.

ಆದರೆ ಇಲ್ಲೊಬ್ಬ ಮಹಿಳೆ 18 ಗರ್ಭಾಪಾತದ ನಂತರ ಮಗುವಿಗೆ ಜನ್ಮ ನೀಡಿದ್ದಾರೆ. ಆಶ್ಚರ್ಯವಾದರೂ ಈ ಸುದ್ದಿ ನಿಜ. 38 ವರ್ಷದ ಮಹಿಳೆ 20 ವರ್ಷದಲ್ಲಿ  18 ಬಾರಿ ಗರ್ಭಪಾತವಾಗಿ ಈಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಉತ್ತರ ಪದೇಶ ರಾಜ್ಯದ ಆಗ್ರಾ ಜಿಲ್ಲೆಯ ಬರೇನ್'ನಲ್ಲಿನ ಹಾತಿಗಾರಿ ಹಳ್ಳಿಯ ರೈತಾಪಿ ಕುಟುಂಬ ರಜನಿ ಎಂಬಾಕೆ ಹಲವು ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿರುವುದು ವೈದ್ಯರಲ್ಲಿಯೇ ಅಚ್ಚರಿ ಮೂಡಿಸಿದೆ. ಸದ್ಯ ಆಸ್ಪತ್ರೆಯಲ್ಲಿರುವ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' ವೈದ್ಯರು ತಿಳಿಸಿದ್ದಾರೆ.

ವೈದ್ಯರು ಲ್ಯಾಪರೊಸ್ಕೋಪಿಕ್ ಚಿಕಿತ್ಸೆ ನಡೆಸಿ ಗರ್ಭಾಶಯದಲ್ಲಿದ್ದ ಮಗುವಿಗೆ ಹಾಗೂ ತಾಯಿಗೆ ಯಾವುದೇ ತೊಂದರೆಯಾಗದಂತೆ ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಅಮಿತ್ ತಂಡನ್ ಹಾಗೂ ಡಾ. ವೈಶಾಲಿ ತಂಡ  ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆದಿದ್ದರು. ಈ ಅಪರೂಪದ ಪ್ರಕ್ರಿಯೆಯನ್ನು ಗಿನ್ನೀಸ್ ದಾಖಲೆಗೆ ಸೇರ್ಪಡಿಸುವುದಕ್ಕೆ ವೈದ್ಯರು ಚಿಂತನೆ ನಡೆಸಿದ್ದಾರೆ.

click me!