ಕಲಬುರಗಿಯಲ್ಲಿ ಚುನಾವಣೆ ಬಿಸಿ: ಖರ್ಗೆಗೆ ಚುನಾವಣೆ ಕಾರ್ಯತಂತ್ರದ ಪೂರ್ಣ ಹೊರೆ

By Suvarna Web DeskFirst Published May 17, 2017, 8:10 AM IST
Highlights

ಕಲಬುರಗಿ ಜಿಲ್ಲೆ 9 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಾಣೆ  ಒಂದು  ವರ್ಷ ಇರುವಾಗಲೇ ಕಲಬುರಗಿಯಲ್ಲಿ  ಎಲೆಕ್ಷನ್ ಕಾವು ತೀವ್ರಗೊಂಡಿದೆ. ರಾಜಕೀಯ ಪಕ್ಷಗಳ ಮುಖಂಡರಲ್ಲಿ ಟಿಕೇಟ್​​ಗಾಗಿ ಲಾಭಿ, ಪೈಪೋಟಿ ಬಲು ಜೋರಾಗಿಯೇ ಕಂಡು ಬರುತ್ತಿದೆ. ವರಿಷ್ಠರು ತಮ್ಮನ್ನು ಗುರುತಿಸಲಿ ಎಂದು ಟಿಕೇಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಸುತ್ತಾಡಿ ಜನರ ಮತ್ತು ಪಕ್ಷದ ನಾಯಕರ ಗಮನ ಸೆಳೆಯುವ ಯತ್ನ ನಡೆಸುತ್ತಿದ್ದಾರೆ.

ಕಲಬುರಗಿ(ಮೇ.17): ಕಲಬುರಗಿ ಜಿಲ್ಲೆ 9 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಾಣೆ  ಒಂದು  ವರ್ಷ ಇರುವಾಗಲೇ ಕಲಬುರಗಿಯಲ್ಲಿ  ಎಲೆಕ್ಷನ್ ಕಾವು ತೀವ್ರಗೊಂಡಿದೆ. ರಾಜಕೀಯ ಪಕ್ಷಗಳ ಮುಖಂಡರಲ್ಲಿ ಟಿಕೇಟ್​​ಗಾಗಿ ಲಾಭಿ, ಪೈಪೋಟಿ ಬಲು ಜೋರಾಗಿಯೇ ಕಂಡು ಬರುತ್ತಿದೆ. ವರಿಷ್ಠರು ತಮ್ಮನ್ನು ಗುರುತಿಸಲಿ ಎಂದು ಟಿಕೇಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಸುತ್ತಾಡಿ ಜನರ ಮತ್ತು ಪಕ್ಷದ ನಾಯಕರ ಗಮನ ಸೆಳೆಯುವ ಯತ್ನ ನಡೆಸುತ್ತಿದ್ದಾರೆ.

ಇನ್ನು ಕಲಬುರಗಿಯಲ್ಲಿ ಈ ಬಾರಿಯ ಚುನಾವಣೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮತ್ತಷ್ಟು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಹಿಂದೆ ಕಲಬುರಗಿಯ ರಾಜಕಾರಣದಲ್ಲಿ ಸಕ್ರೀಯರಾಗಿದ್ದ ಮಾಜಿ ಸಿಎಂ ಧರ್ಮಸಿಂಗ್ ಈ ಬಾರಿ ಅನಾರೋಗ್ಯದಿಂದ ಬಳಲುತ್ತಿದ್ದು ಇದರ ಕಾರ್ಯತಂತ್ರದ ಪೂರ್ಣ ಹೊಣೆಗಾರಿಕೆ ಖರ್ಗೆ ಮೇಲಿರಲಿದೆ. ಖರ್ಗೆ ಅವರಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಗಳು ಬಿಜೆಪಿಯಲ್ಲಿ  ಇಲ್ಲದಿದ್ರೂ ಯಡಿಯೂರಪ್ಪ ಪ್ರಭಾವವೇ ಇಲ್ಲಿ ಬಿಜೆಪಿಗೆ ಬಂಡವಾಳ.

ಒಟ್ಟಿನಲ್ಲಿ ಈಗಾಗಲೇ ಬಿಸಿಲೂರಿನಲ್ಲಿ ಚುನಾವಣೆಯ ಬಿಸಿ ಶುರುವಾಗಿದ್ದು, ಆಕಾಂಕ್ಷಿಗಳು ಟಿಕೆಟ್​ಗಾಗಿ ಲಾಭಿ ಶುರು ಮಾಡಿಕೊಂಡಿದ್ದಾರೆ. ಯಾವ ಪಕ್ಷದಲ್ಲಿ ಯಾವ್ಯಾವ ನಾಯಕರಿಗೆ ಸಿಗುತ್ತದೋ ಕಾದು ನೋಡಬೇಕಿದೆ.

click me!