ತರಿಕೆರೆ ಬಳಿಯ ಅರಣ್ಯದಲ್ಲಿ ಕಡವೆ ಬೇಟೆ, ಇನ್ಪೋಸಿಸ್ ಉದ್ಯೋಗಿ ಸೇರಿ 11 ಮಂದಿ ಅರೆಸ್ಟ್

By suvarna web deskFirst Published Jan 1, 2017, 11:51 PM IST
Highlights

ಬಂಧಿತರಲ್ಲಿ ಇನ್ಪೋಸಿಸ್ ಉದ್ಯೋಗಿ ಮೀರ್ನಾಯಿರ್ ಅಲಿ, ಪಿಯು ವಿದ್ಯಾರ್ಥಿ ಮೀರ್ ನಜೀರ್, ರಿಯಲ್ ಎಸ್ಟೆಟ್ ಉದ್ಯಮಿ ಶಾರ್ಪ್ ಶೂಟರ್ ರಪಿಕ್ ತಲೆಮರೆಸಿಕೊಂಡಿದ್ದು, ಬಂಧಿತರಿಂದ ೨ ವಾಹನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಉಲ್ಲಾಸ್, ಉಪ ಅರಣ್ಯವಲಯಾಧಿಕಾರಿ ಸೂರಪ್ಪ ಇತರರು ಪಾಲ್ಗೊಂಡಿದ್ದರು.

ಚಿಕ್ಕಮಗಳೂರು(ಜ.02): ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಡಿಗೆ ಅತಿಕ್ರಮ ಪ್ರವೇಶ ಮಾಡಿ ಎರಡು ಕಡವೆಗಳನ್ನ ಬೇಟೆಯಾಡಿದ ಆರೋಪದ ಮೇಲೆ ಓರ್ವ ಶಾರ್ಪ್ ಶೂಟರ್ ಸೇರಿದಂತೆ ೧೧ ಜನರನ್ನ ಬಂಧಿಸಲಾಗಿದೆ. ತರೀಕೆರೆ ತಾಲೂಕು ತಣಿಗೆಬೈಲು ಅರಣ್ಯ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಕೆಮ್ಮಣ್ಣಗುಂಡಿ ರಾಜ್ಮಹಲ್ ಮರ್ಗದ ನೆತ್ತಿಚೌಕದ ಬಳಿ ಶನಿವಾರ ರಾತ್ರಿ ೨ ಕಡವೆಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಧ್ಯರಾತ್ರಿ ಬೇಟೆಯಾಡಿದ ಮಾಹಿತಿಯನ್ನು ಸ್ಥಳೀಯರು ಅರಣ್ಯ ಇಲಾಖೆಗೆ ತಲುಪಿಸಿದ್ದಾರೆ.ತಕ್ಷಣ ಕಾರ್ಯಪ್ರೌವೃತ್ತರಾದ ಅರಣ್ಯ ಸಿಬ್ಬಂದಿ ಕೆಮ್ಮಣ್ಣಗುಂಡಿ ಅರಣ್ಯ ತನಿಖಾ ಠಾಣೆ ಬಳಿ ಕಾದು ಕುಳಿತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

click me!