
ನವದೆಹಲಿ[ಮೇ.17]: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ, ಕನ್ನಡಿಗ ಮದನ್ ಬಿ. ಲೋಕುರ್ ಫಿಜಿ ದೇಶದ ಸುಪ್ರೀಂಕೋರ್ಟ್‌ನ ಮೇಲ್ಮನವಿ ಪೀಠದ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ಭಾರತೀಯ ನ್ಯಾಯಾಧೀಶರಿಗೆ ಇಂಥ ಗೌರವ ಸಿಕ್ಕಿದ್ದು ಬಹುಶಃ ಇದೇ ಮೊದಲು ಎನ್ನಲಾಗಿದೆ.
ನ್ಯಾ.ಲೋಕುರ್ ಅವರು ಹೊಸ ಹುದ್ದೆಯಲ್ಲಿ 3 ವರ್ಷ ಕಾರ್ಯನಿರ್ವಹಿಸಲಿದ್ದಾರೆ. ಸಿವಿಲ್ ಮತ್ತು ವಾಣಿಜ್ಯ ವಿವಾದ ಸಂಬಂಧ ಫಿಜಿ ಸುಪ್ರೀಂಕೋರ್ಟ್ ನೀಡುವ ಆದೇಶಗಳನ್ನು ಮೇಲ್ಮನವಿ ಪೀಠದಲ್ಲಿ ಪ್ರಶ್ನಿಸಬಹುದು. ಈ ಪೀಠದಲ್ಲಿ ಫಿಜಿ ಸುಪ್ರೀಂಕೋರ್ಟ್‌ನ ಜಡ್ಜ್‌ಗಳ ಜೊತೆಗೆ ಇತರೆ ಕೆಲವು ದೇಶಗಳ ಜಡ್ಜ್‌ಗಳಿಗೂ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ. ಅದರಂತೆ ಇದೀಗ ನ್ಯಾ.ಲೋಕುರ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ಪೀಠ ವರ್ಷದಲ್ಲಿ ಮೂರು ಬಾರಿ ಮಾತ್ರ ತಲಾ 15 ದಿನಗಳಂತೆ ಕಾರ್ಯನಿರ್ವಹಿಸುತ್ತದೆ. ನ್ಯಾ.ಲೋಕುರ್ ಅವರು 2019ರ ಆ.15ರಿಂದ ಆ.30ರವರೆಗೆ ನಡೆಯಲಿರುವ ಕಲಾಪದಲ್ಲಿ ಭಾಗಿಯಾಗಲಿದ್ದಾರೆ.
ನ್ಯಾ.ಲೋಕುರ್ ಅವರು 2018ರ ಡಿ.31ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.