ಪೋಷಕರೇ ಎಚ್ಚರ ಕಟ್ಟೆಚ್ಚರ! ನಿಮ್ಮ ಮಕ್ಕಳ ಮೇಲೂ ನಿಗಾ ಇರಿಸಿ

Published : May 17, 2019, 07:36 AM IST
ಪೋಷಕರೇ ಎಚ್ಚರ ಕಟ್ಟೆಚ್ಚರ! ನಿಮ್ಮ ಮಕ್ಕಳ ಮೇಲೂ ನಿಗಾ ಇರಿಸಿ

ಸಾರಾಂಶ

ಪೋಷಕರೇ ಎಚ್ಚರ! ನಿಮ್ಮ ಮಕ್ಕಳು ಇಂತಹ ಕೃತ್ಯ ಎಸಗಬಹುದು. 

ಕೌಲಾಲಂಪುರ: ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಆಟಗಳನ್ನು ಆಡಿ ವಿಶ್ವದಾದ್ಯಂತ ನೂರಾರು ಮಕ್ಕಳು, ಯುವಕರು ಸಾವನ್ನಪ್ಪಿ ದ ಘಟನೆಗಳ ಬೆನ್ನಲ್ಲೇ, ವಿದ್ಯಾರ್ಥಿನಿಯೊಬ್ಬಳು ಫೋಟೋ ಷೇರ್ ಮಾಡಲು ಇರುವ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಆನ್‌ಲೈನ್ ಸಮೀಕ್ಷೆ ನಡೆಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಮಲೇಷ್ಯಾದಲ್ಲಿ ನಡೆದಿದೆ. 

ಹೀಗಾಗಿ ಮತ್ತೊಮ್ಮೆ ಪೋಷಕರು ತಮ್ಮ ಮಕ್ಕಳ ಸಾಮಾಜಿಕ ಜಾಲ ತಾಣದ ಮೇಲೆ ಹದ್ದಿನಗಣ್ಣಿಡುವ ಪರಿಸ್ಥಿತಿ ಎದುರಾಗಿದೆ. ಮಲೇಷ್ಯಾದ ಸರವಾಕ್ ರಾಜ್ಯದ 16 ವರ್ಷ ವಿದ್ಯಾರ್ಥಿನಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ‘ ಅತ್ಯಂತ ಮಹತ್ವದ ವಿಷಯ. ನನಗೆ ಸಾವು/ ಬದುಕಿನ ವಿಷಯದಲ್ಲಿ ಸಹಾಯ ಮಾಡಿ’ ಎಂದು ಪೋಸ್ಟ್ ಒಂದನ್ನು ಮಾಡಿದ್ದಳು. ಆಕೆಯ ಪೋಸ್ಟ್ ನೋಡಿದ ಆಕೆ ಹಿಂಬಾಲಕರ ಪೈಕಿ ಶೇ. 69 ರಷ್ಟು ಜನ ಸಾಯುವ ಬಗ್ಗೆ ಸಲಹೆ ನೀಡಿದ್ದರಂತೆ. 

ಈ ಹಿನ್ನೆ ಲೆಯಲ್ಲಿ ವಿದ್ಯಾರ್ಥಿನಿ ಮನೆಯ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ನಡುವೆ ವಿದ್ಯಾರ್ಥಿನಿಗೆ ಆತ್ಮಹತ್ಯೆಗೆ ಸಲಹೆ ನೀಡಿದವರು, ಆತ್ಮಹತ್ಯೆಗೆ ಉತ್ತೇಜನ ನೀಡಿದ ಆರೋಪಕ್ಕೆ ತುತ್ತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬನ್ನೇರುಘಟ್ಟದಲ್ಲಿ ಅಪರೂಪದ ಅತಿಥಿ, ಆಫ್ರಿಕಾದಿಂದ ಆಗಮಿಸಿದ ಕ್ಯಾಪುಚಿನ್ ಕೋತಿಗಳು!
ದೇಶದಲ್ಲಿ ದಯನೀಯ ಸ್ಥಿತಿಗಿಳಿದ ಅನ್ನದಾತ, ಸಾಲ ಮರುಪಾವತಿಸಲು ಕಿಡ್ನಿ ಮಾರಿದ ರೈತ!