ಚಿಕಿತ್ಸೆ ವೇಳೆ ಬಾಯಲ್ಲಿ ಸ್ಫೋಟ, ಮಹಿಳೆ ಸಾವು!

By Web DeskFirst Published May 17, 2019, 8:16 AM IST
Highlights

ಚಿಕಿತ್ಸೆ ವೇಳೆ ಬಾಯಲ್ಲಿ ಸ್ಫೋಟ ಸಂಭವಿಸಿ ವಿಷ ಸೇವಿಸಿದ್ದ ಮಹಿಳೆ ಸಾವು| ಬಾಯಿಯಲ್ಲಿ ಕಾಣಿಸಿಕೊಂಡ ಬೆಂಕಿ ಹಾಗೂ ಹೊಗೆ

ಅಲಿಗಢ[ಮೇ.17]: ವಿಷ ಸೇವಿಸಿದ್ದ ಮಹಿಳೆಯೊಬ್ಬಳಿಗೆ ಚಿಕಿತ್ಸೆ ನೀಡುವಾಗ ಆಕೆಯ ಬಾಯಲ್ಲಿ ಸ್ಫೋಟ ಸಂಭವಿಸಿ, ಆ ಮಹಿಳೆ ಸಾವನ್ನಪ್ಪಿದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ಬುಧವಾರ ನಡೆದಿದೆ.

ಶೀಲಾ ದೇವಿ (40) ಎಂಬ ಮಹಿಳೆಯನ್ನು ಚಿಕಿತ್ಸೆಗೆಂದು ಜವಾಹರಲಾಲ್‌ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯುಕ್ತ ಆಹಾರ ಪದಾರ್ಥಗಳನ್ನು ಹೀರಿಕೊಳ್ಳುವ ಪೈಪ್‌ ಅನ್ನು ಬಾಯಿಗೆ ಅಳವಡಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಬಾಯಿಯಿಂದ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿದೆ.

ಘಟನೆಯ ಹೇಗಾಯ್ತು?: ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಸಲ್ಫೋಸ್‌ ಟ್ಯಾಬ್ಲೆಟ್‌ (ಅಲ್ಯುಮಿನಿಯಂ ಪಾಸ್ಪೇಟ್‌ ಅನ್ನು ಸೇವಿಸಿದ್ದಳು. ಆ ಮಾತ್ರೆ ಫಾಸ್ಫೀನ್‌ ಗ್ಯಾಸ್‌ ಅನ್ನು ಉತ್ಪತ್ತಿ ಮಾಡಿದೆ. ಅಲ್ಲದೇ ದಹನಶೀಲ ಅಲ್ಯುಮಿನಿಯಂ ಆಕ್ಸೈಡ್‌ಗಳು ಉತ್ಪತ್ತಿಯಾಗಿದ್ದು, ಅವು ಗ್ಯಾಸ್ಟ್ರಿಕ್‌ ಆ್ಯಸಿಡ್‌ ಜೊತೆ ಸಂಯೋಜನೆಗೊಂಡು ಸ್ಫೋಟ ಸಂಭವಿಸಿದೆ. ಈ ದೃಶ್ಯ ಸಿಸಿ ಟೀವಿ ಕ್ಯಾಮರಾದಲ್ಲೂ ಸೆರೆಯಾಗಿದ್ದು, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಇತಿಹಾಸದಲ್ಲೇ ಇಂಥದ್ದೊಂದು ಘಟನೆ ನಡೆದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

click me!