ದೀಪಕ್ ಮಿಶ್ರಾ ಭಾರತದ ನೂತನ ಮುಖ್ಯನ್ಯಾಯಮೂರ್ತಿ

By Suvarna Web DeskFirst Published Aug 8, 2017, 9:13 PM IST
Highlights

. 63 ವರ್ಷದ ಮಿಶ್ರಾ ಅವರು ಒಡಿಶಾ ಮೂಲದವರಾಗಿದ್ದು, ಪಾಟ್ನಾ ಹಾಗೂ ದೆಹಲಿ ಹೈಕೋರ್ಟ್'ಗಳಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ನವದೆಹಲಿ(ಆ.08): ನ್ಯಾಯಾಮೂರ್ತಿ ದೀಪಕ್ ಮಿಶ್ರಾ ಅವರನ್ನು ಭಾರತದ ಮುಖ್ಯ ನ್ಯಾಯಾಧೀಶರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಹಾಲಿ ನ್ಯಾಯಾಮೂರ್ತಿ ಜೆ.ಎಸ್.ಖೇಹರ್ ಅವರು ಆಗಸ್ಟ್ 27 ರಂದು ನಿವೃತ್ತರಾಗಲಿದ್ದು, ಅಂದೇ  ಭಾರತದ 45ನೇ ಮುಖ್ಯನ್ಯಾಯಾಧೀಶರಾಗಿ ರಾಷ್ಟ್ರಪತಿ ರಾಮ್'ನಾಥ್ ಕೋವಿಂದ್ ಅವರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 63 ವರ್ಷದ ಮಿಶ್ರಾ ಅವರು ಒಡಿಶಾ ಮೂಲದವರಾಗಿದ್ದು, ಪಾಟ್ನಾ ಹಾಗೂ ದೆಹಲಿ ಹೈಕೋರ್ಟ್'ಗಳಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

2011ರಿಂದ ಸುಪ್ರೀಂ ಕೋರ್ಟ್'ನಲ್ಲಿ ನ್ಯಾಯಮೂರ್ತಿಯಾಗಿದ್ದರು. ಇವರ ಸೇವಾ ಅವಧಿ ಅಕ್ಟೋಬರ್ 2, 2018ರವರೆಗೆ ಇರಲಿದೆ.

click me!