ಪೇಟಿಎಂ ಬಹಿಷ್ಕರಿಸಲು ಆರೆಸ್ಸೆಸ್ ಅಂಗಸಂಸ್ಥೆ ಕರೆ

By Suvarna Web DeskFirst Published Aug 8, 2017, 8:17 PM IST
Highlights

ಡಿಜಿಟಲ್ ಪಾವತಿ ಸೇವೆ ಪೇಟಿಎಂ’ನ್ನು ಬಳಸಬೇಡಿ ಎಂದು ಕರೆ ನೀಡಿರುವ ಆರೆಸ್ಸೆಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಚೀನಾ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು  ತೀವ್ರಗೊಳಿಸಿದೆ. ಪೇಟಿಎಂಗೆ ಬಹಿಷ್ಕರಿಸುವಂತೆ ನಾವು ಜನರಿಗೆ ಕರೆ ನೀಡಿದ್ದೇವೆ. ಸರ್ಕಾರವು ಕೂಡಾ ಚೀನಾ ಹೂಡಿಕೆಯಿರುವ ಪೇಟಿಎಂನಂತಹ ಕಂಪನಿಗಳಿಗೆ ಅನುಮತಿ ನಿರಾಕರಿಸಬೇಕು ಎಂದು ಮಂಚ್ ಸಹ-ಸಂಚಾಲಕ ಅಶ್ವನಿ ಮಹಾಜನ್ ಪಿಟಿಐಗೆ ತಿಳಿಸಿದ್ದಾರೆ.

ಬೆಂಗಳೂರು: ಡಿಜಿಟಲ್ ಪಾವತಿ ಸೇವೆ ಪೇಟಿಎಂ’ನ್ನು ಬಳಸಬೇಡಿ ಎಂದು ಕರೆ ನೀಡಿರುವ ಆರೆಸ್ಸೆಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಚೀನಾ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು  ತೀವ್ರಗೊಳಿಸಿದೆ.

ಪೇಟಿಎಂಗೆ ಬಹಿಷ್ಕರಿಸುವಂತೆ ನಾವು ಜನರಿಗೆ ಕರೆ ನೀಡಿದ್ದೇವೆ. ಸರ್ಕಾರವು ಕೂಡಾ ಚೀನಾ ಹೂಡಿಕೆಯಿರುವ ಪೇಟಿಎಂನಂತಹ ಕಂಪನಿಗಳಿಗೆ ಅನುಮತಿ ನಿರಾಕರಿಸಬೇಕು ಎಂದು ಮಂಚ್ ಸಹ-ಸಂಚಾಲಕ ಅಶ್ವನಿ ಮಹಾಜನ್ ಪಿಟಿಐಗೆ ತಿಳಿಸಿದ್ದಾರೆ.

ಅದು ದೇಶದ ಸುರಕ್ಷತೆಗೆ ಅಪಾಯವೊಡ್ಡುವುದಲ್ಲದೇ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಅವು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ, ಎಂದು ಅವರು ಹೇಳಿದ್ದಾರೆ.

ಪೇಟಿಎಂನ್ನು ಸ್ವದೇಶಿ ಸಂಸ್ಥೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಅದರಲ್ಲಿ ಬಹುತೇಕ ಹೂಡಿಕೆ ಮಾಡಿರುವುದು ಚೀನಾ ಕಂಪನಿಗಳಾದ ಅಲಿಬಾಬಾ ಹಾಗೂ ಇನ್ನಿತರ ಸಂಸ್ಥೆಗಳು, ಎಂದು ಅವರು ಹೇಳಿದ್ದಾರೆ.

ಎಲ್ಲಾ ಕ್ಷೇತ್ರದಲ್ಲೂ ವಿದೇಶಿ ಬಂಡವಾಳವನ್ನು ತಡೆಯಬೇಕು ಎಂಬುವುದು ನಮ್ಮ ನಿಲುವಾಗಿದೆ, ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

click me!