ಬೇಸಿಕ್ ಎಸ್ ಬಿ ಖಾತೆಗಳಿಗೆ ಬ್ಯಾಂಕ್ ಗಳಿಂದ ಹೊಸ ಬರೆ

First Published May 28, 2018, 11:16 AM IST
Highlights

ಮಾಸಿಕ ನಿಗದಿತ 4 ಕ್ಯಾಷ್ ವಿತ್‌ಡ್ರಾವಲ್ ಮಿತಿಯನ್ನು ಮೀರಿ 5 ಅಥವಾ 5ಕ್ಕಿಂತ ಹೆಚ್ಚು ಬಾರಿ ಹಣವನ್ನು ತೆಗೆಸುವ ‘ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆ’ಗಳನ್ನು (ಬಿಎಸ್‌ಬಿಡಿಎ) ಬ್ಯಾಂಕ್‌ಗಳು ರೆಗ್ಯುಲರ್ ಸೇವಿಂಗ್ಸ್ ಬ್ಯಾಂಕ್ ಖಾತೆಗಳನ್ನಾಗಿ ಪರಿವರ್ತಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. 

ನವದೆಹಲಿ: ಮಾಸಿಕ ನಿಗದಿತ 4 ಕ್ಯಾಷ್ ವಿತ್‌ಡ್ರಾವಲ್ ಮಿತಿಯನ್ನು ಮೀರಿ 5 ಅಥವಾ 5ಕ್ಕಿಂತ ಹೆಚ್ಚು ಬಾರಿ ಹಣವನ್ನು ತೆಗೆಸುವ ‘ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆ’ಗಳನ್ನು (ಬಿಎಸ್‌ಬಿಡಿಎ) ಬ್ಯಾಂಕ್‌ಗಳು ರೆಗ್ಯುಲರ್ ಸೇವಿಂಗ್ಸ್ ಬ್ಯಾಂಕ್ ಖಾತೆಗಳನ್ನಾಗಿ ಪರಿವರ್ತಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. 

ಬಡ ಜನರು ಬ್ಯಾಂಕ್ ವ್ಯವಹಾರಗಳಲ್ಲಿ ತೊಡಗಿಕೊಳ್ಳಲಿ ಎಂಬ ಉದ್ದೇಶದಿಂದ 2012ರಲ್ಲಿ ‘ಬಿಎಸ್ ಬಿಡಿಎ’ ಖಾತೆಗಳನ್ನು ಆರ್‌ಬಿಐ ಆರಂಭಿಸಿತ್ತು. ಇಂಥ 54 ಕೋಟಿ ಖಾತೆಗಳು ಇಂದು ಚಾಲ್ತಿಯಲ್ಲಿವೆ. ಇಂಥ ಖಾತೆಗಳಿಗೆ ಶೂನ್ಯ ಠೇವಣಿ ಸೌಲಭ್ಯ ಕಲ್ಪಿಸಲಾಗಿದ್ದು, ಮಾಸಿಕ 4 ವಿತ್ ಡ್ರಾವಲ್‌ಗೆ ಅವಕಾಶ ಕಲ್ಪಿಸಲಾಗಿದೆ. 

ಆದರೆ ಈಗ ಮಾಸಿಕ 4 ಕ್ಕಿಂತ ಹೆಚ್ಚು ಬಾರಿ ಹಣವನ್ನು ಹಿಂಪಡೆದವರ ಈ ಖಾತೆಗಳನ್ನು ಮಾಮೂಲಿ ಸೇವಿಂಗ್ಸ್ ಬ್ಯಾಂಕ್ ಖಾತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬಾಂಬೆ ಐಐಟಿ ಪ್ರಾಧ್ಯಾಪಕ ಆಶಿಶ್ ದಾಸ್ ಅವರು ಸಿದ್ಧಪಡಿಸಿದ ವರದಿಯೊಂದರಲ್ಲಿ ಹೇಳಿದ್ದಾರೆ.

click me!