ಆಡಳಿತಾತ್ಮ ಕ ಶುಲ್ಕ ಕಡಿತಕ್ಕೆ ಇಪಿಎಫ್‌ಒ ನಿರ್ಧಾರ

First Published May 28, 2018, 11:03 AM IST
Highlights

ಆಡಳಿತಾತ್ಮಕ ಶುಲ್ಕವನ್ನು ಶೇ.0.5ರಷ್ಟು ಕಡಿಮೆ ಮಾಡಲು ನೌಕರರ ಪಿಂಚಣಿ ಸಂಸ್ಥೆ (ಇಪಿಎಫ್‌ಒ) ನಿರ್ಧರಿಸಿದೆ.  ಇದರಿಂದ ಸುಮಾರು 5 ಲಕ್ಷ ಉದ್ಯೋಗ ದಾತರಿಗೆ ವಾರ್ಷಿಕ 900 ಕೋಟಿ ರು. ಉಳಿತಾಯ ವಾಗಲಿದೆ. ಉದ್ಯೋಗದಾತರಿಂದ  ಪಾವತಿಸಲಾದ ಒಟ್ಟು ವೇತನದಲ್ಲಿ ಶೇ.0.65 ರಿಂದ ಶೇ.0.50 ಕ್ಕೆ ಆಡಳಿತಾತ್ಮಕ ಶುಲ್ಕ ಕಡಿತಗೊಳಿಸಲು ಇಪಿಎಫ್‌ಒ ಟ್ರಸ್ಟಿಗಳ ಸಭೆ ಯಲ್ಲಿ ನಿರ್ಧರಿಸಲಾಗಿದೆ.

ನವದೆಹಲಿ: ಆಡಳಿತಾತ್ಮಕ ಶುಲ್ಕವನ್ನು ಶೇ.0.5ರಷ್ಟು ಕಡಿಮೆ ಮಾಡಲು ನೌಕರರ ಪಿಂಚಣಿ ಸಂಸ್ಥೆ (ಇಪಿಎಫ್‌ಒ) ನಿರ್ಧರಿಸಿದೆ.  ಇದರಿಂದ ಸುಮಾರು 5 ಲಕ್ಷ ಉದ್ಯೋಗ ದಾತರಿಗೆ ವಾರ್ಷಿಕ 900 ಕೋಟಿ ರು. ಉಳಿತಾಯವಾ ಗಲಿದೆ. ಉದ್ಯೋಗದಾತರಿಂದ ಪಾವತಿಸಲಾದ ಒಟ್ಟು ವೇತನದಲ್ಲಿ ಶೇ.0.65 ರಿಂದ ಶೇ.0.50 ಕ್ಕೆ ಆಡಳಿತಾತ್ಮಕ ಶುಲ್ಕ ಕಡಿತಗೊಳಿಸಲು ಇಪಿಎಫ್‌ಒ ಟ್ರಸ್ಟಿಗಳ ಸಭೆಯಲ್ಲಿ ನಿರ್ಧರಿಸ ಲಾಗಿದೆ.

ಜೂ.1 ರಿಂದ ಇದು ಅನ್ವಯ ವಾಗಲಿದೆ. ಇದು ಉದ್ಯೋಗದಾತರಿಗೆ ತಮ್ಮ ನೌಕರ ರನ್ನು ಇಪಿಎಫ್‌ಒ ನಡೆಸುವ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಗೆ ತರುವುದಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಸಂಸ್ಥೆಯ ಆಯುಕ್ತ ವಿ.ಪಿ. ಜೋಯ್ ಹೇಳಿದ್ದಾರೆ. 

ಕಳೆದ ವರ್ಷ ಮಂಡಳಿ ಆಡಳಿ ತಾತ್ಮಕ ಶುಲ್ಕವಾಗಿ 3800 ಕೋಟಿ ರು. ಸಂಗ್ರಹಿಸಿತ್ತು. ಹೀಗೆ ವಾರ್ಷಿಕವಾಗಿ ಸಂಗ್ರಹಿಸಿದ ಹಣದಿಂದಾಗಿ ಇದೀಗ 20000 ಕೋಟಿ ರು. ಹೆಚ್ಚುವರಿ ಉಳಿದಿದ್ದು, ಇದರಿಂದ ಅದಕ್ಕೆ 1600 ಕೋಟಿ ಆದಾಯ ಬರುತ್ತಿದೆ.

click me!