ರೇಪ್‌ ಕೇಸ್ ಆರೋಪಿ ಗಾಯತ್ರಿ ಪ್ರಜಾಪತಿಗೆ ಬೇಲ್ ನೀಡಿದ್ದಕ್ಕೆ ಜಡ್ಜ್'ಗೇ ಶಿಕ್ಷೆ

Published : Apr 29, 2017, 05:22 AM ISTUpdated : Apr 11, 2018, 01:12 PM IST
ರೇಪ್‌ ಕೇಸ್ ಆರೋಪಿ ಗಾಯತ್ರಿ ಪ್ರಜಾಪತಿಗೆ ಬೇಲ್ ನೀಡಿದ್ದಕ್ಕೆ ಜಡ್ಜ್'ಗೇ ಶಿಕ್ಷೆ

ಸಾರಾಂಶ

ರೇಪ್‌ ಕೇಸ್ ಆರೋಪಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಗೆ ಬೇಲ್ ದಯಪಾಲಿಸಿದ ಸೆಶನ್ಸ್ ಕೋರ್ಟ್ ಜಡ್ಜ್ 'ನ್ನು ಸೇವೆಯಿಂದ ಶುಕ್ರವಾರ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಅಮಾನತು ಮಾಡಿದೆ. ಜೊತೆಗೆ ಅವರ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿದೆ. ಅಷ್ಟೇ ಅಲ್ಲದೇ ಪೋಕ್ಸೊ ಕೋರ್ಟ್‌ ಗಾಯತ್ರಿ ಪ್ರಜಾಪತಿಗೆ ಮಂಜೂರು ಮಾಡಿದ್ದ ಬೇಲ್‌'ನ್ನು ರದ್ದುಗೊಳಿಸಿದೆ.

ಲಕ್ನೋ(ಎ.29): ರೇಪ್‌ ಕೇಸ್ ಆರೋಪಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಗೆ ಬೇಲ್ ದಯಪಾಲಿಸಿದ ಸೆಶನ್ಸ್ ಕೋರ್ಟ್ ಜಡ್ಜ್ 'ನ್ನು ಸೇವೆಯಿಂದ ಶುಕ್ರವಾರ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಅಮಾನತು ಮಾಡಿದೆ. ಜೊತೆಗೆ ಅವರ ವಿರುದ್ಧ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಿದೆ. ಅಷ್ಟೇ ಅಲ್ಲದೇ ಪೋಕ್ಸೊ ಕೋರ್ಟ್‌ ಗಾಯತ್ರಿ ಪ್ರಜಾಪತಿಗೆ ಮಂಜೂರು ಮಾಡಿದ್ದ ಬೇಲ್‌'ನ್ನು ರದ್ದುಗೊಳಿಸಿದೆ.

ಗಾಯತ್ರಿ ಪ್ರಜಾಪತಿಗೆ ಬೇಲ್ ರದ್ದು ಮಾಡಿದ ಪೋಕ್ಸೋ ಕೋರ್ಟ್‌ ಕ್ರಮವನ್ನು ಪ್ರಶ್ನಿಸಿ ಯೋಗಿ ಆದಿತ್ಯನಾಥ್ ಸರ್ಕಾರ ಪ್ರಜಾಪತಿಯ ಬೇಲ್ ರದ್ದು ಮಾಡುವಂತೆ ಮನವಿ ಮಾಡಿತ್ತು. 49 ವರ್ಷದ ಗಾಯತ್ರಿ ಪ್ರಜಾಪತಿ ಮತ್ತಿತರು ಆರು ಮಂದಿ ಮಹಿಳೆಯೋರ್ವರ ಮೇಲೆ ಗ್ಯಾಂಗ್‌ ರೇಪ್ ಎಸಗಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.

ಅಕ್ಟೋಬರ್ 2014 ರಿಂದ ಜುಲೈ 2016ರವರೆಗೆ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾಳೆ. ಅಂತೆಯೇ ಪ್ರಜಾಪತಿಯನ್ನು ಇದೇ ಮಾ.15 ರಂದು ಲಕ್ನೋನಲ್ಲಿ ಅರೆಸ್ಟ್ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ ಸರ್ಕಾರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಕಾಮಗಾರಿ: ಸಿಎಂ ಸಿದ್ದರಾಮಯ್ಯ
ಜಿಬಿಎ ವ್ಯಾಪ್ತಿಯಲ್ಲಿ ಬಿಲ್ ಬಾಕಿ ಇಲ್ಲ, ಪಾವತಿಯಲ್ಲೂ ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ: ಡಿಕೆಶಿ