ಆಪರೇಷನ್‌ಗೇ ಆಪರೇಷನ್ : ಬಿಜೆಪಿ ತೊರೆಯುತ್ತಾರಾ ಸಂಸದ..?

Published : Jan 23, 2019, 01:40 PM ISTUpdated : Jan 23, 2019, 01:43 PM IST
ಆಪರೇಷನ್‌ಗೇ ಆಪರೇಷನ್ : ಬಿಜೆಪಿ ತೊರೆಯುತ್ತಾರಾ ಸಂಸದ..?

ಸಾರಾಂಶ

ಇತ್ತ ಆಪರೇಷನ್ ಕಮಲಕ್ಕೆ ಶತ ಪ್ರಯತ್ನಗಳು ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ತಮ್ಮ ಶಾಸಕರನ್ನು ಕರ್ನಾಟಕದಲ್ಲಿ ರೆಸಾರ್ಟ್ ನಲ್ಲಿ ಇರಿಸಿ ರಾಜಕಾರಣ ಮಾಡುತ್ತಿದ್ದರೆ ಅತ್ತ ಬಿಜೆಪಿ ಸಂಸದಗೆ ಮತ್ತೊಂದು ಪಕ್ಷದಿಂದ ಆಹ್ವಾನ ಬಂದಿದೆ. 

ನವದೆಹಲಿ : ಬಿಜೆಪಿಯಲ್ಲಿದ್ದುಕೊಂಡೇ ತಮ್ಮ ಪಕ್ಷವನ್ನು ಕಠುವಾಗಿ ಟೀಕಿಸುವ ಸಂಸದ ಶತ್ರುಘ್ನ ಸಿನ್ಹಾಗೆ ಪಕ್ಷವೊಂದರಿಂದ ಇದೀಗ ಆಹ್ವಾನ ಬಂದಿದೆ.

ಇತ್ತೀಚೆಗಷ್ಟೇ ಪಂಚರಾಜ್ಯ ಚುನಾವಣೆಯಲ್ಲಿ ಸೋತಿದ್ದು, ಸಮೀಪಿಸುತ್ತಿರುವ ಲೋಕಸಭಾ ಚುನಾವಣೆ ಬೆನ್ನಲ್ಲೇ ನಡೆಯುತ್ತಿರುವ ಈ ಬೆಳವಣಿಗೆಗಳು ಬಿಜೆಪಿಗೆ ಆತಂಕ ತಂದೊಡ್ಡುವ ಲಕ್ಷಗಳು ಕಾಣುತ್ತಿವೆ. 

ಮೋದಿ ವಿರೋಧಿ ಶಾಟ್‌ಗನ್‌ಗೆ ಗುನ್ನಾ ಇಡಲು ಬಿಜೆಪಿ ಪ್ಲ್ಯಾನ್!

ಬಿಹಾರದ  ತೇಜ್ ಪ್ರತಾಪ್ ಯಾದವ್  RJDಗೆ ಸೇರ್ಪಡೆಯಾಗುವಂತೆ ಸಿನ್ಹಾ ಅವರನ್ನು ಆಹ್ವಾನಿಸಿದ್ದಾರೆ. ಅಲ್ಲದೇ ಸಿನ್ಹಾ ಅವರು ಬಿಜೆಪಿ ತೊರೆಯಲು ಸಜ್ಜಾಗಿದ್ದಾರೆ ಎಂದೂ ಕೂಡ ಅವರು ಹೇಳಿದ್ದಾರೆ. 

ಈ ಪ್ರಶ್ನೆಗೆ ಉತ್ತರ ನೀಡಲು ಬಿಜೆಪಿ ಮುಖಂಡ ಹಿಂದೇಟು !

ನಿರಂತರವಾಗಿ ತಾವು ಶತ್ರುಘ್ನ ಸಿನ್ಹಾ ಅವರೊಂದಿಗೆ ಸಂಪರ್ಕದಲ್ಲಿದ್ದು, ಅನೇಕ ಬಾರಿ ಅವರ ನಿವಾಸಕ್ಕೂ ಕೂಡ ಭೇಟಿ ನೀಡಿದ್ದೇನೆ. ಆದ್ದರಿಂದ ನಮ್ಮ ಜನತಾ ದರ್ಬಾರ್ ಸೇರಲು ಅವರಿಗೆ ಸ್ವಾಗತಿಸಿದ್ದಾಗಿ ಯಾದವ್ ಹೇಳಿದ್ದಾರೆ. 

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಚೌಕೀದಾರ್ ಚೋರ್ ಕೆಲಸವನ್ನು ಮುಂದುವರಿಸಿದ್ದಾರೆ. ರಫೇಲ್ ಒಪ್ಪಂದದ ಬಗೆಗಿನ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಸೂಕ್ತ ಉತ್ತರ ನೀಡುವುದರಿಂದ ದೂರ ಸರಿಯುತ್ತಿದ್ದಾರೆ ಎಂದಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!