ಲೋಕಸಭಾ ಚುನಾವಣೆ : ಈ ಪಕ್ಷದಲ್ಲಿ ಹಾಲಿ ಶಾಸಕರು, ಸಚಿವರಿಗಿಲ್ಲ ಟಿಕೆಟ್

Published : Jan 23, 2019, 01:02 PM IST
ಲೋಕಸಭಾ ಚುನಾವಣೆ :  ಈ ಪಕ್ಷದಲ್ಲಿ ಹಾಲಿ ಶಾಸಕರು, ಸಚಿವರಿಗಿಲ್ಲ ಟಿಕೆಟ್

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ವಿವಿಧ ಪಕ್ಷಗಳು ಸಾಕಷ್ಟು ತಯಾರಿಯಲ್ಲಿ ತೊಡಗಿಕೊಂಡಿವೆ. ಇದೆ ವೇಳೆ ಯಾವುದೇ ಹಾಲಿ ಶಾಸಕರು ಹಾಗೂ ಸಚಿವರಿಗೆ ಮುಂದಿನ ಚುನಾವಣೆಗೆ ಟಿಕೆಟ್ ನೀಡುವುದಿಲ್ಲ ಎಂದು ಆಪ್ ಮುಖಂಡು ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಪ್ಲಾನ್ ರೂಪಿಸುತ್ತಿವೆ. 

ಇದೇ ವೇಳೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಮುಖಂಡರು ಯಾವುದೇ ಹಾಲಿ ಶಾಸಕರು ಹಾಗೂ ಸಚಿವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ. ದಿಲ್ಲಿ ಘಟಕದ ಆಮ್ ಆದ್ಮಿ ಮುಖಂಡ ಗೋಪಾಲ್ ರೈ ಈ ವಿಚಾರವನ್ನು ತಿಳಿಸಿದ್ದಾರೆ. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರೂ ಕೂಡ ಆಸಕ್ತರಾಗಿದ್ದಾರೆ. ಯಾರಿಗೂ ಕೂಡ ಈ ಬಾರಿ ಟಿಕೆಟ್ ನೀಡುವುದಿಲ್ಲ  ಎಂದು ಹೇಳಿದ್ದಾರೆ. 

ಒಟ್ಟು 7 ಸಂಸದೀಯ ಸ್ಥಾನಗಳಲ್ಲಿ  6 ಸ್ಥಾನಗಳಿಗೆ ಇಂಚಾರ್ಜ್ ಗಳನ್ನು ನೇಮಕ ಮಾಡಲಾಗಿದೆ. ಪಶ್ಚಿಮ ದಿಲ್ಲಿಯ ಸ್ಥಾನವೊಂದಕ್ಕೆ ಉಸ್ತುವಾರಿ ನೇಮಕ ಬಾಕಿ ಉಳಿದಿದೆ. 

ಲೋಕಸಭಾ ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿಯೇ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಗೋಪಾಲ್ ರೈ ತಿಳಿಸಿದ್ದಾರೆ. ಅಲ್ಲದೇ ಇದೇ ವೇಳೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನೂ ಕೂಡ ತಳ್ಳಿಹಾಕಿದ್ದಾರೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!