ಜೆಟ್ ಏರ್ ವೇಸ್ ಪ್ರಯಾಣಿಕರ ಕಿವಿ, ಮೂಗಲ್ಲಿ ರಕ್ತ

By Web DeskFirst Published Sep 20, 2018, 4:06 PM IST
Highlights

ಮುಂಬೈನಿಂದ  ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ ವೇಸ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಅನಾರೋಗ್ಯಕ್ಕೆ ಒಳಗಾದ ಘಟನೆ ಗುರುವಾರ ನಡೆದಿದೆ. 

ಮುಂಬೈ : ಜೆಟ್ ಏರ್ ವೇಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮವಾಗಿ ಪ್ರಯಾಣಿಕರು ಅನಾರೋಗ್ಯಕ್ಕೆ ಒಳಗಾದ ಘಟನೆ ಗುರುವಾರ ನಡೆದಿದೆ. 

ಈ ಸಂಬಂಧ ನಾಗರಿಕ ವಿಮಾನ ಯಾನ ಸಚಿವಾಲಯವು ಸೂಕ್ತ ತನಿಖೆ ನಡೆಸುವಂತೆ ಆದೇಶ ನೀಡಿದೆ. 

ಈ ಸಂಬಂಧ ತನಿಖೆ ನಡೆಸಿ ಆದಷ್ಟು ಶೀಘ್ರವೇ ವರದಿಯನ್ನು ನೀಡಬೇಕು ಎಂದು  ನಾಗರಿಕ ವಿಮಾನ ಯಾನ ಸಚಿವಾಲಯವು ಜೆಟ್ ಏರ್ ವೇಸ್ ನಿರ್ದೇಶಕರಿಗೆ ತಿಳಿಸಿದೆ. 

9w 0697 ಏರ್ ವೇಸ್ ಮುಂಬೈ ನಿಂದ ಜೈಪುರಕ್ಕೆ ತೆರಳುತ್ತಿತ್ತು. ಇದರಲ್ಲಿ  30 ಮಂದಿ ಪ್ರಯಾಣಿಕರಿದ್ದು , ಇದರ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಣಾ ಸ್ವಿಚ್ ಹಾಕುವುದನ್ನು ಮರೆತದ್ದರಿಂದ ಈ ಅವಘಡ ಸಂಭವಿಸಿದೆ. 

ಅಲ್ಲದೇ ಕಲವು ಪ್ರಯಾಣಿಕರಿಗೆ ಕಿವಿ ಮೂಗಿನಲ್ಲಿಯೂ ಕೂಡ ಈ ವೇಳೆ ರಕ್ತ ಸೋರಿಕೆಯಾಗಿದ್ದು, ಇವರೆಲ್ಲರನ್ನೂ ಕೂಡ ತಕ್ಷಣವೇ  ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

Panic situation due to technical fault in 9W 0697 going from Mumbai to Jaipur. Flt return back to Mumbai after 45 mts. All passengers are safe including me. pic.twitter.com/lnOaFbcaps

— Darshak Hathi (@DarshakHathi)
click me!