ಹಾಸನ[ಸೆ. 19] ಸಿಎಂ ಎರಡು ತಿಂಗಳಿನಿಂದ ಕಲೆಕ್ಷನ್ ಗಾಗಿ ಇಂಜಿನಿಯರ್ ಗಳ ಪೋಸ್ಟ್ ಇಟ್ಟುಕೊಂಡಿದ್ದರು ಎಂದು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಡಿಪಿಆರ್ ಇಲಾಖೆಯಲ್ಲಿ ಮುಂಬಡ್ತಿ ನೀಡಲು ಸಿಎಂ ಕಲೆಕ್ಷನ್ ಮಾಡಿದ್ದಾರೆ. ಎರಡು ತಿಂಗಳ ಬಳಿಕ ಈಗ ಈ ಹುದ್ದೆಗಳಿಗೆ 24 ಸ್ಥಾನಗಳಲ್ಲಿ 7 ಮಂದಿಗೆ ಹುದ್ದೆ ನೀಡಿದ್ದಾರೆ. ಒಂದೊಂದು ಹುದ್ದೆಗೆ ಸಿಎಂ ಎಷ್ಟೆಷ್ಟು ಪಡೆದಿದ್ದಾರೆ? ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.
ರೇವಣ್ಣ ಕಾಮಗಾರಿಗೆ ಯಡಿಯೂರಪ್ಪ ಬ್ರೇಕ್ ಅಂತೆ...ನನ್ನ ಕಾಮಗಾರಿಗೆ ಬ್ರೇಕ್ ಹಾಕಿಕೊಳ್ಳಿ ಅದಕ್ಕೆ ಏನು ಹೇಳುವುದಿಲ್ಲ.. ನೆರೆಸಂತ್ರಸ್ತರಿಗೆ ಮಾತ್ರ ಬ್ರೇಕ್ ಹಾಕಬೇಡಿ ಎಂದು ಮನವಿ ಮಾಡಿಕೊಂಡರು.
ಎಚ್ಡಿಕೆ ತಪ್ಪು ಮಾಡಿದ್ದಾರೆ ಎಂದ ಸಹೋದರ ರೇವಣ್ಣ
ನೆರೆ ಸಂತ್ರಸ್ತರು ಭಿಕ್ಷುಕರಂತೆ ಕಾಯುತ್ತಿದ್ದಾರೆ. ಯಡಿಯೂರಪ್ಪ ಈಗಾಗಲೇ ಉತ್ತರಾಧಿಕಾರಿ ಹುಡುಕುತ್ತಿದ್ದಾರೆ. ತಮ್ಮ ಮಗ ವಿಜಯೇಂದ್ರ ಅವರನ್ನು ಏನು ಬೇಕಾದ್ರೂ ಮಾಡ್ಕೊಳಪ್ಪಾ ಅಂತಾ ಹೇಳಿದ್ದಾರೆ. ಮೋದಿಯವರು ಯಡಿಯೂರಪ್ಪಗೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಮಾಡಿ ಅಂತಾ ವಿನಾಯಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮತ್ತು ಅಮಿತ್ ಷಾ ವಿರುದ್ಧವೂ ರೇವಣ್ಣ ನಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ ಈಗ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಪ್ರವಾಹದಿಂದಾಗಿ 35 ಸಾವಿರ ಕೋಟಿ ಆಸ್ತಿಪಾಸ್ತಿ ನಷ್ಟ ಎಂದು ಸರ್ಕಾರವೇ ಹೇಳಿದೆ. ಆದರೆ ಈಗ ರಾಜ್ಯ ಸರ್ಕಾರ ಕೇವಲ 1500 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಹಾಸನ ಜಿಲ್ಲೆಯಲ್ಲಿಯೇ 500 ಕೋಟಿ ನಷ್ಟ ಉಂಟಾಗಿದೆ. ರಾಜ್ಯದ ಎಲ್ಲ ಬೆಳೆ ಸೇರಿದ್ರೆ 20 ಸಾವಿರ ಕೋಟಿ ಆಸ್ತಿಪಾಸ್ತಿ ನಷ್ಟವಾಗಿದೆ. ಸುಮ್ಮನೆ ನಾಮಕಾವಸ್ತೆಗೆ ಹಣ ಬಿಡುಗಡೆ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಜನರಿಗೆ ಆಶಾಭಾವನೆ ಇತ್ತು ಅದಕ್ಕೆ ತಣ್ಣೀರು ಬಿಟ್ಟಂತಾಗಿದೆ ಎಂದು ಹೇಳಿದರು.
ಕನಿಷ್ಠ 20 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕಿತ್ತು. ಈಗ ಯಾವ ಚುನಾವಣೆಯೂ ಇಲ್ಲಾ ಎಂದು ಸರ್ಕಾರ ಪ್ರವಾಹದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.